ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಟಿಟಿಇ ನಿರ್ನಾಮಕ್ಕೆ ಬದ್ಧ:ರಾಜಪಕ್ಷೆ
ತಮಿಳು ಬಂಡುಕೋರರ ಉಗ್ರವಾದವನ್ನು ಹತ್ತಿಕ್ಕುವುದಾಗಿ ಪ್ರತಿಜ್ಞೆ ಮಾಡಿರುವ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಷೆ, ಎಲ್‌ಟಿಟಿಇ ಉಗ್ರರಿಂದ ರಕ್ಷಣಾ ಪಡೆಗಳು ವಶಪಡಿಸಿಕೊಂಡಿದ್ದ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಸಮ್ಮಂತುರೈನ ಪಶ್ಚಿಮ ಪ್ರಾಂತ್ಯದಲ್ಲಿ ನೇನಸಾಲ ಆರ್ಥಿಕ ಅಭಿವೃದ್ಧಿ ಯೋಜನೆಯನ್ನು ಉಪಗ್ರಹ ಮೂಲಕ ಪ್ರಾರಂಭಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ಹಿಡಿತದಿಂದ ತತ್ತರಿಸುತ್ತಿದ್ದ ಪ್ರದೇಶಗಳನ್ನು ವಶಪಡಿಸಿಕೊಂಡ ಆ ಪ್ರದೇಶಗಳಲ್ಲಿ ಅಭಿವೃದ್ಧಿ ಮಾಡುವಲ್ಲಿ ಮತ್ತು ಶಾಂತಿ ಸ್ಥಾಪಿಸುವಲ್ಲಿ ಸರಕಾರ ಯಶಸ್ವಿಯಾಗಿದೆ ಎಂದು ಹೇಳಿದರು. ಅಲ್ಲದೆ, ಈ ವರ್ಷದಲ್ಲಿ ಭಯೋತ್ಪಾದನೆಯನ್ನು ಕೊನೆಗೊಳಿಸುವುದು ಸರಕಾರದ ಹೋರಾಟವಾಗಲಿದೆ ಎಂದು ಅವರು ಹೇಳಿದರು.

ಈ ಅಭಿವೃದ್ಧಿ ಕಾರ್ಯಕ್ರಮಗಳಿಂದ ಕೆಲವು ಜನರ ಗುಂಪುಗಳು ವಂಚಿತಗೊಂಡಿದ್ದು, ಎಲ್ಲರಿಗೂ ಸಮಾನ ಪ್ರಯೋಜನ ಸಿಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ವರ್ಷದ ಕೊನೆಯ ಮೊದಲು 1000 ನೇನಸಾಲಾ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವ ಅಂತಿಮ ಗುರಿಯನ್ನು ಹೊಂದಿದೆ ಎಂದು ನಾನಾಸಾಲ ಯೋಜನೆಯನ್ನು ಉದ್ದೇಶಿಸಿ ಹೇಳಿದರು.

ನೇನಸಾಲಾ ಕಾರ್ಯಕ್ರಮವು ಹಳ್ಳಿಯ ಜನರಿಗೆ ಸಾರ್ವಜನಿಕ ಆರೋಗ್ಯ, ಇಂಗ್ಲೀಷ್ ವಿದ್ಯಾಭ್ಯಾಸ ಮತ್ತು ಕೃಷಿ ಜ್ಞಾನವನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದ ಅವರು ಈಗ ಹಳ್ಳಿಯ ಮಕ್ಕಳು ಕೂಡಾ ಕಂಪ್ಯೂಟರ್ ಮುಂದೆ ಕುಳಿತ ಜಗತ್ತಿನೊಂದಿಗೆ ಸಂಬಂಧ ಕಲ್ಪಿಸಲು ಈ ಯೋಜನೆಯು ಅವಕಾಶವನ್ನು ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.
ಮತ್ತಷ್ಟು
ಬೆನಜೀರ್ ಭುಟ್ಟೋ ಕ್ಷೇತ್ರದ ಚುನಾವಣೆ ರದ್ದು
ಭುಟ್ಟೊ ಹತ್ಯೆ: ಸ್ಕಾಟ್ಲೆಂಡ್ ಯಾರ್ಡ್ ತನಿಖೆ ಆರಂಭ
ಭುಟ್ಟೋ ಹತ್ಯೆ: ಸ್ಕಾಟ್ಲೆಂಡ್ ಯಾರ್ಡ್ ತಂಡ ಪಾಕಿಸ್ತಾನಕ್ಕೆ
ಮಲೇಷ್ಯಾ: ಭಾರತೀಯ ಸಾಮೂಹಿಕ ವಿಚಾರಣೆಗೆ ಅನುಮತಿ
ಪರಮಾಣು ಬಿಕ್ಕಟ್ಟು: ಅಮೆರಿಕಕ್ಕೆ ದ.ಕೊರಿಯಾ ಸಹಕಾರ
ಮಾಹಿತಿ ನಿರ್ಲಕ್ಷಿಸಿದ ಭುಟ್ಟೋ: ಮುಷರಫ್ ಹೇಳಿಕೆ