ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹತ್ಯೆ: ಭುಟ್ಟೋ ಬಳಿಯಲ್ಲಿದ್ದ ನಿಗೂಢ ವ್ಯಕ್ತಿ ಯಾರು?
ಪಾಕಿಸ್ತಾನ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಹತ್ಯೆಗೆ ಸಂಬಂಧಿಸಿ ಹಂತಕ ಯಾರು ಎಂಬ ನಿಗೂಢತೆಗೆ ಮತ್ತೊಬ್ಬ ಸೇರ್ಪಡೆಯಾಗಿದ್ದಾನೆ. ಸಮಾವೇಶದಲ್ಲಿ ಭುಟ್ಟೋ ಅವರ ಬಲಭಾಗದಲ್ಲಿ ನಿಂತುಕೊಂಡಿದ್ದ ವ್ಯಕ್ತಿಯೊಬ್ಬ ಸಂಶಯಾಸ್ಪದ ರೀತಿಯಲ್ಲಿ ಸನ್ನೆ ಮಾಡುತ್ತಿದ್ದ ದೃಶ್ಯವು ದಾಳಿಯ ವೀಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದ್ದು, ಎಲ್ಲರ ಗಮನ ಅತ್ತ ಕಡೆ ಹೊರಳಿದೆ.

ಭುಟ್ಟೋ ಸಹಾಯಕನಂತೆ ಕಂಡುಬಂದ ಖಾಲಿದ್ ಶಹಿನ್‌ಶಾ ಎಂಬ ವ್ಯಕ್ತಿಯು ಭುಟ್ಟೋ ಭಾಷಣ ಮುಕ್ತಾಯಗೊಂಡ ಕೂಡಲೇ ಅವರ ಕಾರಿನೊಳಗೆ ತೂರಿಕೊಳ್ಳುವ ಅವಸರದಲ್ಲಿದ್ದನು ಎಂದು ಪಿಪಿಪಿ ಕಾರ್ಯಕರ್ತರು ಹೇಳಿದ್ದಾರೆ. ಶಹಿನ್‌ಶಾ ಈಗ ತಲೆಮರೆಸಿಕೊಂಡಿದ್ದಾನೆ.

ವೀಡಿಯೋದಿಂದ ತೆಗೆದ ಆತನ ಭಾವಚಿತ್ರವನ್ನು ಸರಕಾರವು ಬುಧವಾರ ಪ್ರಕಟಿಸಿತ್ತು. ಆತನ ವಿವರಗಳನ್ನು ನೀಡಿದವರಿಗೆ 10 ಲಕ್ಷ ಬಹುಮಾನವನ್ನು ಕೂಡಾ ಘೋಷಿಸಲಾಗಿದೆ.

ಏತನ್ಮಧ್ಯೆ, ಭುಟ್ಟೋ ಹತ್ಯೆಯ ಹೊಣೆಯನ್ನು ಒಸಾಮಾ ಬಿನ್ ಲಾಡೆನ್ ಅಥವಾ ಅಲ್ ಖಾಯಿದಾ ವಹಿಸಿಕೊಂಡಿರುವ ವರದಿಗಳ ಬಗ್ಗೆ ತನಗೇನು ತಿಳಿದಿಲ್ಲ ಎಂದು ಅಮೆರಿಕ ತಿಳಿಸಿದೆ.

ನಾವು ಆ ವರದಿಯನ್ನು ನೋಡಿಲ್ಲ. ಒಂದು ವೇಳೆ ವರದಿಗಳು ಇದ್ದಲ್ಲಿ ನಾವು ಅದರ ಬಗ್ಗೆ ಲಕ್ಷ್ಯವಹಿಸುತ್ತೇವೆ ಎಂದು ಶ್ವೇತಭವನ ಉಪ ವಕ್ತಾರ ಟೋನೀ ಫ್ರಾಟೋ ಅವರನ್ನು ಉಲ್ಲೇಖಿಸಿ ಏಜೆನ್ಸಿಗಳು ತಿಳಿಸಿವೆ.

ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಪ್ರಯತ್ನಗಳನ್ನು ಅಮೆರಿಕವು ಪ್ರಶಂಸಿಸಿದ್ದು, ಇಸ್ಲಾಮಾಬಾದ್‌ನಲ್ಲಿ ಯಾವುದೇ ನಾಯಕತ್ವವಿದ್ದರೂ, ಅವರು ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಬದ್ಧವಾಗಿರಬೇಕೆಂಬುದು ಅಮೆರಿಕದ ಬಯಕೆ ಎಂದು ತಿಳಿಸಿದೆ.
ಮತ್ತಷ್ಟು
ಎಲ್‌ಟಿಟಿಇ ನಿರ್ನಾಮಕ್ಕೆ ಬದ್ಧ:ರಾಜಪಕ್ಷೆ
ಬೆನಜೀರ್ ಭುಟ್ಟೋ ಕ್ಷೇತ್ರದ ಚುನಾವಣೆ ರದ್ದು
ಭುಟ್ಟೊ ಹತ್ಯೆ: ಸ್ಕಾಟ್ಲೆಂಡ್ ಯಾರ್ಡ್ ತನಿಖೆ ಆರಂಭ
ಭುಟ್ಟೋ ಹತ್ಯೆ: ಸ್ಕಾಟ್ಲೆಂಡ್ ಯಾರ್ಡ್ ತಂಡ ಪಾಕಿಸ್ತಾನಕ್ಕೆ
ಮಲೇಷ್ಯಾ: ಭಾರತೀಯ ಸಾಮೂಹಿಕ ವಿಚಾರಣೆಗೆ ಅನುಮತಿ
ಪರಮಾಣು ಬಿಕ್ಕಟ್ಟು: ಅಮೆರಿಕಕ್ಕೆ ದ.ಕೊರಿಯಾ ಸಹಕಾರ