ಸುಮಾರು 3 ಶತಕೋಟಿ ರೂ. ಮೌಲ್ಯದ ನಕಲಿ ಭಾರತೀಯ ಕರೆನ್ಸಿ ನೋಟುಗಳು ನೇಪಾಳದಲ್ಲಿ ಚಲಾವಣೆಯಲ್ಲಿದೆ ಎಂದು ನೇಪಾಳದ ಸೆಂಟ್ರಲ್ ಬ್ಯಾಂಕ್‌ನ ಉನ್ನತಾಧಿಕಾರಿಯೊಬ್ಬರು ಸೋಮವಾರ ತಿಳಿಸಿದೆ.
ನಕಲಿ ಭಾರತದ ಕರೆನ್ಸಿಗಳು ನಗರಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ ಎಂದು ನೇಪಾಳ ರಾಷ್ಟ್ರ ಬ್ಯಾಂಕ್ ಉಪ ಗವರ್ನರ್ ವೀರ್ ವಿಕ್ರಂ ರಾಯಮಾಜಿ ತಿಳಿಸಿದರು.
ನೇಪಾಳದ ಮಾರುಕಟ್ಟೆಯಲ್ಲಿ ಭಾರತದ ನಕಲಿ ನೋಟುಗಳು ಚಲಾವಣೆಯಲ್ಲಿರುವುದರಿಂದ 1000 ರೂ. ಮತ್ತು 500 ರೂ. ಮುಖಬೆಲೆಯ ಭಾರತದ ಕರೆನ್ಸಿಗಳ ಬಳಕೆಯನ್ನು ಸರ್ಕಾರ ನಿಷೇಧಿಸಿದೆ ಎಂದು ಪಶ್ಚಿಮ ನೇಪಾಳದ ಪ್ರವಾಸಿ ಕೇಂದ್ರವಾದ ಪೋಕಾರಾದಲ್ಲಿ ಭಾನುವಾರ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ತಿಳಿಸಿದರು.
|