ಪಾಕಿಸ್ತಾನವು ಅಲ್ ಖಾಯಿದಾ ಮುಖಂಡ ಒಸಾಮಾ ಬಿನ್ ಲಾಡೆನ್ ಅವರ ಬೆನ್ನತ್ತಿಲ್ಲ ಎಂದು ಅಧ್ಯಕ್ಷ ಮುಷರ್ರಫ್ ತಿಳಿಸಿದ್ದು, ಲಾಡೆನ್ ಪಾಕಿಸ್ತಾನದಲ್ಲಿ ಇರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದು ತಿಳಿಸಿದರು. ಬಿನ್ ಲಾಡೆನ್ ಬೇರಾವುದೇ ರಾಷ್ಟ್ರದಲ್ಲಿ ಇಲ್ಲವೆಂದು ಹೇಳಿದಾಗ, "ಲಾಡೆನ್ ಇಲ್ಲಿ ಇದ್ದಾನೆಂಬುದಕ್ಕೆ ಪುರಾವೆಯಿಲ್ಲ.
ಆದರೆ ಭಯೋತ್ಪಾದಕರು, ಅಲ್ ಕೈದಾ ಮತ್ತು ತಾಲಿಬಾನ್ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದೇವೆ ಹೊರತು ವಿಶೇಷವಾಗಿ ಲಾಡೆನ್‌ಗೋಸ್ಕರ ಹುಡುಕುತ್ತಿಲ್ಲ ಎಂದು ನುಡಿದರು.
ನಾವು ಉಗ್ರವಾದದ ವಿರುದ್ಧ ಹೋರಾಡುತ್ತಿದ್ದೇವೆ. ನಾವು ಸುಮಾರು 700 ಅಲ್ ಕೈದಾ ನಾಯಕರನ್ನು ಬಂಧಿಸಿದ್ದೇವೆ ಮತ್ತು ನಿರ್ನಾಮ ಮಾಡಿದ್ದೇವೆ. ಪಾಕಿಸ್ತಾನ ಮಾತ್ರ ಈ ಕೆಲಸ ಮಾಡಿದೆ ಎಂದು ಅವರು ಹೇಳಿದರು.
ಭಾನುವಾರ ನಡೆದ ಸಂದರ್ಶನದಲ್ಲಿ ಭುಟ್ಟೊ ಹತ್ಯೆಗೆ ಅಲ್ ಕೈದಾ ಉಗ್ರರನ್ನು ಅವರು ಟೀಕಿಸಿದರು. ವಿಶೇಷವಾಗಿ ಪಾಕಿಸ್ತಾನದ ಬುಡಕಟ್ಟು ಪ್ರದೇಶದಿಂದ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಉಗ್ರಗಾಮಿ ಬೈತುಲ್ಲಾ ಮೆಹಸೂದ್ ಅವರು ದೂಷಿಸಿದರು.
|