ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದೇಶಿ ಮಿಲಿಟರಿ ಕಾರ್ಯಾಚರಣೆಯಿಲ್ಲ
ಪಾಕಿಸ್ತಾನ ತನ್ನ ಭೂಪ್ರದೇಶದಲ್ಲಿ ವಿದೇಶಗಳಿಂದ ಮಿಲಿಟರಿ ಕಾರ್ಯಾಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಪಾಕ್‌ನಲ್ಲಿ ಕಾರ್ಯಾಚರಣೆ ನಡೆಸಲು ಅಮೆರಿಕ ತನ್ನ ಪಡೆಗಳಿಗೆ ಆದೇಶ ನೀಡುವ ಬಗ್ಗೆ ಆಲೋಚಿಸುತ್ತಿದ್ದು, ಅಲ್ ಕೈದಾ ನಾಯಕ ಲಾಡೆನ್ ಪಾಕಿಸ್ತಾನದಲ್ಲಿ ಅಡಗಿರಬಹುದೆಂಬ ಶಂಕೆಯಿಂದ ಲಾಡೆನ್ ನಿರ್ನಾಮಕ್ಕಾಗಿ ಅಮೆರಿಕ ಮಿಲಿಟರಿ ಕಾರ್ಯಾಚರಣೆಗೆ ಯೋಜಿಸಿದೆ ಎಂಬ ವರದಿ ನಿರಾಧಾರ ಎಂದು ಹೇಳಿದೆ.

ಪಾಕ್‌ನಲ್ಲಿ ಕಾರ್ಯಚರಣೆ ಕೈಗೊಳ್ಳುವ ಬಗ್ಗೆ ಅಮೆರಿಕ ಸರಕಾರ ಸಿಐಎ ಮತ್ತು ಮಿಲಿಟರಿ ಅಧಿಕಾರವನ್ನು ವಿಸ್ತರಿಸಲು ಚಿಂತಿಸುತ್ತಿದೆ ಎಂದು ಅಮೆರಿಕ ಪತ್ರಿಕೆಯೊಂದು ವರದಿ ಮಾಡಿತ್ತು.

ಅಲ್-ಖೈದ ಮತ್ತು ತಾಲಿಬಾನ್ ಪಾಕ್‌ನ್ನು ಅಸ್ಥಿರಗೊಳಿಸುವ ಉದ್ದೇಶ ಹೊಂದಿದ್ದಾರೆ ಎಂಬ ಗುಪ್ತಚರ ವರದಿಯ ಹಿನ್ನೆಲೆಯಲ್ಲಿ ಅಮೆರಿಕ ಅಧಿಕಾರಿಗಳು ಈ ದಿಶೆಯಲ್ಲಿ ಪರಿಗಣಿಸುತ್ತಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿತ್ತು.

ಪಾಕ್ ಸರಕಾರ ಮತ್ತು ಸೇನಾ ಅಧಿಕಾರಿಗಳು ಈ ವರದಿಯನ್ನು ನಿರಾಕರಿಸಿದ್ದು, ಅಂತಹ ಕಾರ್ಯಚರಣೆಗೆ ಪಾಕ್ ಅನುಮತಿ ನೀಡುವುದಿಲ್ಲ ಎಂದು ಹೇಳಿದೆ.
ಮತ್ತಷ್ಟು
ಪಾಕಿಸ್ತಾನ ಲಾಡೆನ್ ಬೆನ್ನೆತ್ತಿಲ್ಲ:ಮುಷರ್ರಫ್
ಕದನವಿರಾಮ ರದ್ದಿನಿಂದ ಶ್ರೀಲಂಕಾ ದುರ್ಬಲ
ನೇಪಾಳದಲ್ಲಿ ಭಾರತದ ನಕಲಿ ನೋಟುಗಳು
ಆತ್ಮಾಹುತಿ ಬಾಂಬರ್ ಸ್ಫೋಟ: 3 ಸೈನಿಕರಿಗೆ ಗಾಯ
ಎಲ್‌ಟಿಟಿಇ ಗುಪ್ತಚರ ದಳದ ನಾಯಕನ ಹತ್ಯೆ
ಬೆನಜೀರ್ ಸಾವಿಗೆ ಆಕೆಯೇ ಹೊಣೆ:ಮುಷರಫ್