ಜಂಟಿ ಸೇನಾ ಕವಾಯತುಗಳು, ಈಶಾನ್ಯ ರಾಷ್ಟ್ರಗಳ ಪೈಲಟ್‌ಗಳಿಗೆ ಮತ್ತು ಜಲಂತಾರ್ಗಾಮಿ ಸಿಬ್ಬಂದಿಗಳು ತರಬೇತಿ ಹಾಗೂ ನವದೆಹಲಿಯ 'ಪೂರ್ವ ನೋಟ' ನೀತಿಯನ್ನು ಇನ್ನಷ್ಟು ಗಟ್ಟಿಗೊಳಿಸುವುದು ಸೇರಿದಂತೆ ರಕ್ಷಣಾ ಸಹಕಾರವನ್ನು ವೃದ್ಧಿಸಲು ಭಾರತವು ಮಲೇಶ್ಯಾದೊಂದಿಗೆ ಒಪ್ಪಂದಂವೊಂದಕ್ಕೆ ಬಂದಿದೆ.
ಭಯೋತ್ಪಾದನೆಯ ವಿರುದ್ಧ ಹೋರಾಡಲೂ ಉಭಯರಾಷ್ಟ್ರಗಳು ಒಪ್ಪಿರುವುದಾಗಿ ಜಂಟಿ ಹೇಳಿಕೆ ನೀಡಲಾಗಿದೆ. ಭಾರತದ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಮಲೇಶ್ಯಾ ಭೇಟಿ ನೀಡಿದ ವೇಳೆ, ಮಲೇಶ್ಯಾ ರಕ್ಷಣಾ ಸಚಿವ ನಜಿಬಾ ರಝಾಕ್ ಅವರೊಂದಿಗೆ ಆಳವಾದ ಮಾತುಕತೆ ನಡೆಸಿದ ಬಳಿಕ ಈ ಹೇಳಿಕೆ ನೀಡಲಾಗಿದೆ.
ತಾಂತ್ರಿಕ ಸಹಾಯ, ಸಹ-ಉತ್ಪಾದನೆ, ಜಂಟಿ ಉದ್ಯಮಗಳು ಮತ್ತು ಔದ್ಯಮಿಕ ಸಹಭಾಗಿತ್ವ ಸೇರಿದಂತೆ ರಕ್ಷಣಾ ಪೂರೈಕೆಗಳಿಗೆ ಸಂಬಂಧಿಸಿದಂತೆ ಸಹಕಾರವನ್ನು ಮುಂದುವರಿಸುವ ಅಗತ್ಯಕ್ಕೆ ಭಾರತ ಮತ್ತು ಮಲೇಶ್ಯಾಗಳು ಪ್ರಾಧಾನ್ಯ ನೀಡಿವೆ ಎಂದು ಆಂಟನಿ ಹೇಳಿದ್ದಾರೆ.
|