ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾ ಸಚಿವ ದಾಸನಾಯಕೆ ಸ್ಫೋಟಕ್ಕೆ ಬಲಿ
ಶ್ರೀಲಂಕಾದ ರಾಜಧಾನಿ ಕೊಲಂಬೊ ಬಳಿ ಶ್ರೀಲಂಕಾದ ಸಚಿವ ಡಿಎಂ ದಾಸನಾಯಕೆ ಅವರಿದ್ದ ವಾಹನವು ರಸ್ತೆ ಬದಿಯ ಶಕ್ತಿಶಾಲಿ ಸ್ಫೋಟಕ್ಕೆ ಗುರಿಯಾಗಿ ದಾಸನಾಯಕೆ ಅಸುನೀಗಿದ್ದಾರೆ. ರಾಷ್ಟ್ರ ನಿರ್ಮಾಣ ಖಾತೆ ಸಚಿವ ದಾಸನಾಯಕೆ ಅವರು ಕೊಲಂಬೊ ಮತ್ತು ಅಂತಾರಾಷ್ಟ್ರೀಯ ನಿಲ್ದಾಣದ ಮಧ್ಯೆ ಬೆಂಗಾವಲು ವಾಹನಗಳ ಮಧ್ಯೆ ಪ್ರಯಾಣಿಸುತ್ತಿದ್ದಾಗ ಬಾಂಬ್ ಸ್ಫೋಟಿಸಿ, ಇನ್ನೂ 7 ಮಂದಿ ಗಾಯಗೊಂಡಿದ್ದಾರೆ.

ಕೊಲಂಬೊಗೆ 12 ಮೈಲು ದೂರದ ಜಾ ಎಲಾ ಪಟ್ಟಣದಲ್ಲಿ ಈ ಸ್ಟೋಟ ಸಂಭವಿಸಿದ್ದು, ಸ್ಫೋಟಕ್ಕೆ ತಮಿಳು ಬಂಡುಕೋರರು ಕಾರಣವೆಂದು ಆರೋಪಿಸಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಶ್ರೀಲಂಕಾ ಪಡೆಗಳು ಮತ್ತು ಬಂಡುಕೋರರ ನಡುವೆ ಕದನ ಉಲ್ಭಣಿಸಿದ್ದು, ತಮಿಳು ಸೆಲ್ವನ್ ಮುಂತಾದ ಎಲ್‌ಟಿಟಿಇ ನಾಯಕರು ಹತರಾಗಿದ್ದರು.

ಸಚಿವರು ತಲೆಗೆ ತೀವ್ರ ಗಾಯಗಳಿಂದಾಗಿ ಶಸ್ತ್ರಚಿಕಿತ್ಸೆ ನಡೆಸುವಾಗ ಸತ್ತಿದ್ದಾರೆಂದು ವರದಿಗಳು ತಿಳಿಸಿವೆ. ತಮಿಳು ವ್ಯಾಘ್ರ ಬಂಡುಕೋರರು ಸಾಮಾನ್ಯವಾಗಿ ಬಳಸುವ ಕ್ಲೇಮೋರ್ ನೆಲಬಾಂಬನ್ನು ದಾಳಿಗೆ ಬಳಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಸಚಿವರ ಕಾರಿಗೆ ಉಂಟಾದ ಹಾನಿಯ ಬಗ್ಗೆ ಸ್ಥಳೀಯ ಟೆಲಿವಿಷನ್ ಚಾನೆಲ್‌ಗಳು ವಿಡಿಯೊ ಚಿತ್ರಗಳಲ್ಲಿ ತೋರಿಸಿವೆ. ತಮಿಳು ಬಂಡುಕೋರರ ಜತೆ ಕದನವಿರಾಮ ರದ್ದುಮಾಡಿರುವುದಾಗಿ ಸರ್ಕಾರ ಘೋಷಿಸಿದ ಬಳಿಕ ರಾಷ್ಟ್ರದ ಉತ್ತರಭಾಗದಲ್ಲಿ ಭೀಕರ ಕದನ ನಡೆಯುತ್ತಿದೆ.

ಸೋಮವಾರ ಮುಂಚೂಣಿ ಪ್ರದೇಶದಲ್ಲಿ ನಡೆದ ಕದನದಲ್ಲಿ 20 ತಮಿಳು ಉಗ್ರರು ಸತ್ತಿದ್ದಾರೆಂದು ಮಿಲಿಟರಿ ತಿಳಿಸಿದೆ. ಅನೇಕ ಮಂದಿ ಸೈನಿಕರು ಕೂಡ ಹತರಾಗಿದ್ದಾರೆ. ಜನವರಿ 16ರಿಂದ ಕದನವಿರಾಮಕ್ಕೆ ತೆರೆಎಳೆಯುವುದಾಗಿ ಶ್ರೀಲಂಕಾ ಔಪಚಾರಿಕ ನೋಟೀಸ್ ನೀಡಿದ ಬಳಿಕ ತಮಿಳು ವ್ಯಾಘ್ರಪಡೆಯನ್ನು ಸಮರಭೂಮಿಯಲ್ಲಿ ಸೋಲಿಸುವ ಗುರಿಯನ್ನು ಶ್ರೀಲಂಕಾ ಹೊಂದಿದೆ.
ಮತ್ತಷ್ಟು
ಭಾರತ-ಮಲೇಶ್ಯಾ ರಕ್ಷಣಾ ಸಹಕಾರ ಒಪ್ಪಂದ
ವಿದೇಶಿ ಮಿಲಿಟರಿ ಕಾರ್ಯಾಚರಣೆಯಿಲ್ಲ
ಪಾಕಿಸ್ತಾನ ಲಾಡೆನ್ ಬೆನ್ನೆತ್ತಿಲ್ಲ:ಮುಷರ್ರಫ್
ಕದನವಿರಾಮ ರದ್ದಿನಿಂದ ಶ್ರೀಲಂಕಾ ದುರ್ಬಲ
ನೇಪಾಳದಲ್ಲಿ ಭಾರತದ ನಕಲಿ ನೋಟುಗಳು
ಆತ್ಮಾಹುತಿ ಬಾಂಬರ್ ಸ್ಫೋಟ: 3 ಸೈನಿಕರಿಗೆ ಗಾಯ