ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಲೇಶಿಯದಲ್ಲಿ ಭಾರತೀಯರ ನೇಮಕ ನಿಷೇಧ
ಭಾರತ ಮತ್ತು ಬಾಂಗ್ಲಾದೇಶದ ಕಾರ್ಮಿಕರ ನೇಮಕವನ್ನು ಮಲೇಶಿಯ ರದ್ದುಮಾಡಿರುವುದಾಗಿ ಮಲೇಶಿಯ ಸರ್ಕಾರ ಮಂಗಳವಾರ ತಿಳಿಸಿದೆ. ಕಳೆದ 2007 ಡಿ.31ರಿಂದ ಜಾರಿಗೆ ಬಂದಿರುವ ಈ ನಿಷೇಧದಿಂದ ಉಭಯ ರಾಷ್ಠ್ರಗಳ ನಡುವೆ ಬಾಂಧವ್ಯ ಮತ್ತಷ್ಟು ಹದಗೆಡಬಹುದೆಂದು ಶಂಕಿಸಲಾಗಿದೆ. ಭಾರತ ಮತ್ತು ಬಾಂಗ್ಲಾದೇಶದಿಂದ ಕಾರ್ಮಿಕರ ನೇಮಕವನ್ನು ರದ್ದುಮಾಡಲು ಎರಡು ವಾರಗಳ ಕೆಳಗೆ ಕ್ಯಾಬಿನೆಟ್ ನಿರ್ಧರಿಸಿತು ಎಂದು ಮಲೇಶಿಯ ಗೃಹಸಚಿವಾಲಯದ ಅಧಿಕಾರಿ ತಿಳಿಸಿದರು.

ಉಭಯ ರಾಷ್ಟ್ರಗಳಿಗೆ ಸೇರಿದ ಪ್ರಸಕ್ತ ಕಾರ್ಮಿಕರ ಕೆಲಸದ ಪರವಾನಗಿಯನ್ನು ನವೀಕರಿಸುವುದಿಲ್ಲ ಎಂದು ಹೇಳಿದ ಅವರು, ವೃತ್ತಿಪರರು ಸೇರಿದಂತೆ ಎಲ್ಲ ವರ್ಗದ ಕಾರ್ಮಿಕರಿಗೆ ಇದು ಅನ್ವಯಿಸುತ್ತದೆ ಎಂದು ನುಡಿದರು. ಮಲೇಶಿಯದಲ್ಲಿ ದಾಖಲಾದ 2 ದಶಲಕ್ಷ ವಿದೇಶಿ ಕಾರ್ಮಿಕರ ಪೈಕಿ ಭಾರತೀಯರು ಶೇ.8 ರಷ್ಟಿದ್ದಾರೆ. ಅವರು ಮುಖ್ಯವಾಗಿ ನಿರ್ಮಾಣ, ಮಾಹಿತಿ ತಂತ್ರಜ್ಞಾನ ಮತ್ತು ವಿತ್ತಸೇವೆಯ ಉದ್ಯಮಗಳಲ್ಲಿ ಉದ್ಯೋಗಿಗಳಾಗಿದ್ದಾರೆ.

ದಕ್ಷಿಣ ಏಷ್ಯ ರಾಷ್ಟ್ರದಲ್ಲಿ ಭಾರತೀಯ ಜನಾಂಗದವರಿಗೆ ತಾರತಮ್ಯದ ಕೂಗು ಕೇಳಿಬಂದಿದ್ದರಿಂದ ಭಾರತ ಮತ್ತು ಮಲೇಶಿಯ ಸಂಬಂಧ ಹಳಸಿದೆ. ಕಳೆದ ನವೆಂಬರ್‌ನಲ್ಲಿ ಜನಾಂಗೀಯ ಭಾರತೀಯರು ಸರ್ಕಾರಿ ವಿರೋಧಿ ಪ್ರತಿಭಟನೆ ನಡೆಸಿದ್ದರು. ಮಲಯ ಜನಾಂಗದವರಿಗೆ ಅನುಕೂಲಕರ ನೀತಿಗಳ ಮೂಲಕ ಮಲೇಶಿಯ ಆಡಳಿತ ಭಾರತೀಯ ಜನಾಂಗವನ್ನು ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿಬಂದಿತ್ತು.
ಮತ್ತಷ್ಟು
ಶ್ರೀಲಂಕಾ ಸಚಿವ ದಾಸನಾಯಕೆ ಸ್ಫೋಟಕ್ಕೆ ಬಲಿ
ಭಾರತ-ಮಲೇಶ್ಯಾ ರಕ್ಷಣಾ ಸಹಕಾರ ಒಪ್ಪಂದ
ವಿದೇಶಿ ಮಿಲಿಟರಿ ಕಾರ್ಯಾಚರಣೆಯಿಲ್ಲ
ಪಾಕಿಸ್ತಾನ ಲಾಡೆನ್ ಬೆನ್ನೆತ್ತಿಲ್ಲ:ಮುಷರ್ರಫ್
ಕದನವಿರಾಮ ರದ್ದಿನಿಂದ ಶ್ರೀಲಂಕಾ ದುರ್ಬಲ
ನೇಪಾಳದಲ್ಲಿ ಭಾರತದ ನಕಲಿ ನೋಟುಗಳು