ಇಂಡೋನೇಶಿಯದ ಮಾಜಿ ಅಧ್ಯಕ್ಷ ಸುಹಾರ್ತೋ ಅವರ ದೇಹಸ್ಥಿತಿ ತೀರಾ ವಿಷಮಿಸಿದ್ದು, ಬಹು ಅಂಗಾಂಗಗಳ ವೈಫಲ್ಯವನ್ನು ತಪ್ಪಿಸಲು ವೈದ್ಯರು ಯತ್ನಿಸಿದ್ದಾರೆ. ಜಕಾರ್ತಾದ ಪೆರ್ಟಾಮಿನಾ ಆಸ್ಪತ್ರೆಗೆ ಅವರನ್ನು ಸೇರಿಸಲಾಗಿದ್ದು, ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೆ ಸುಮಾರು 40 ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಅವರು ಬದುಕುಳಿಯುವ ಆಸೆಯಿಲ್ಲ ಎಂದೂ ವೈದ್ಯರು ನುಡಿದಿದ್ದಾರೆ.
ಸುಹಾರ್ತೊ ತೀವ್ರ ಅಸ್ಥಿರ ಸ್ಥಿತಿಯಲ್ಲಿದ್ದು, ತೀವ್ರ ನಿಗಾ ಅವರಿಗೆ ಅಗತ್ಯವಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಮುಖ್ಯ ವೈದ್ಯರು ತಿಳಿಸಿದ್ದಾರೆ. ಸುಹಾರ್ತೊ ಅವರ ಹೃದಯದ ಎಡಕವಾಟವು ಸಂಕುಚಿಸಿದ್ದು, ಹೃದಯಾಘಾತ ಉಂಟಾಗುವ ಸಂಭವವಿದೆ ಎಂದು ಹೇಳಿದ್ದಾರೆ.
ಸುಮಾರು 3 ದಶಕಗಳ ಕಾಲ ಇಂಡೋನೇಶಿಯವನ್ನು ಆಳಿದ ಸುಹಾರ್ತೊ ಅವರನ್ನು 1998ರಲ್ಲಿ ಉಚ್ಚಾಟಿಸಲಾಯಿತು.1998ರಲ್ಲಿ ಸುಹಾರ್ತೊ ಅವರ ಉಚ್ಚಾಟನೆ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಅವರಿಗೆ ಶಿಕ್ಷೆ ವಿಧಿಸುವ ಪ್ರಯತ್ನಗಳ ನಡುವೆಯೂ ಇಂಡೋನೇಶಿಯದ ರಾಜಕೀಯ ಮತ್ತು ಉದ್ಯಮ ಪ್ರತಿಷ್ಠಿತರು ಸುಹಾರ್ತೊ ಭೇಟಿ ಮಾಡಿದ್ದಾರೆ.
|