ದಕ್ಷಿಣ ಕೊರಿಯದ ರಾಜಧಾನಿ ಸೋಲ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಶೀತಲಾಗಾರ ಉಗ್ರಾಣದಲ್ಲಿ ಬೆಂಕಿ ಮತ್ತು ಸ್ಫೋಟಗಳು ಸಂಭವಿಸಿ 40 ಕಾರ್ಮಿಕರು ಅಸುನೀಗಿದ ಘಟನೆ ಮಂಗಳವಾರ ಸಂಭವಿಸಿದೆ. ಅನೇಕ ಮಂದಿ ಮೃತರು ಸುಟ್ಟು ಕರಕಲಾಗಿದ್ದು, ಅವರನ್ನು ತಕ್ಷಣಕ್ಕೆ ಗುರುತಿಸುವುದು ಕಷ್ಟವಾಗಿದೆ.
ಸುಟ್ಟುಬೂದಿಯಾದ ಉಗ್ರಾಣದ ನೆಲಮಾಳಿಗೆಯಲ್ಲಿ ಸತ್ತವರ ದೇಹಗಳು ಕಂಡುಬಂತೆಂದು ಸ್ಥಳೀಯ ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ. ಸುಮಾರು 10 ಜನರು ಗಾಯಗೊಂಡಿದ್ದು, ಅವರಿಗೆ ಸುಟ್ಟ ಗಾಯ ಮತ್ತು ಹೊಗೆ ಸೇವನೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸತ್ತವರಲ್ಲಿ 13 ಮಂದಿ ಜನಾಂಗೀಯ ಕೊರಿಯನ್ನರಾಗಿದ್ದು, ಚೀನದ ಪೌರತ್ವ ಹೊಂದಿದ್ದಾರೆ.ನಾಲ್ವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಶೇ,40ರಷ್ಟು ಸುಟ್ಟ ಗಾಯಗಳಿಂದ ತೀವ್ರ ನಿಗಾ ಘಟಕದಲ್ಲಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
|