ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯೂಹ್ಯಾಂಪ್‌ಶೈರ್: ಹಿಲರಿ ಕ್ಲಿಂಟನ್ ವಿಜಯ
ಬಹುತೇಕ ಎಲ್ಲಾ ಚುನಾವಣಾ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ, ಡೆಮಾಕ್ರಟ್ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು ನ್ಯೂಹ್ಯಾಂಪ್‌ಶೈರ್‌ನಲ್ಲಿ ನಡೆದ ಪ್ರಾಥಮಿಕ ಚುನಾವಣೆಗಳಲ್ಲಿ ಸಮೀಪದ ಪ್ರತಿಸ್ಪರ್ಧಿ ಬಾರಕ್ ಒಬಾಮ ಅವರನ್ನು ಸೋಲಿಸಿ ವಿಜಯ ಗಳಿಸಿದ್ದಾರೆ.

ನವೆಂಬರ್ ತಿಂಗಳಲ್ಲಿ ನಡೆಯುವ ಮಹಾ ಚುನಾವಣೆಗಳಿಗೆ ಮುನ್ನ ರಿಪಬ್ಲಿಕನ್ ಮತ್ತು ಡೆಮಾಕ್ರಟ್ ಅಭ್ಯರ್ಥಿಗಳನ್ನು ಪ್ರತಿ ರಾಜ್ಯದಲ್ಲೂ ಆರಿಸುವ ಪ್ರಕ್ರಿಯೆಯ ಅಂಗವಾಗಿ ನ್ಯೂಹ್ಯಾಂಪ್‌ಶೈರಿನಲ್ಲಿ ಮಂಗಳವಾರ ಚುನಾವಣೆ ನಡೆದಿತ್ತು.

ಅಯೋವಾದಲ್ಲಿ ದಯನೀಯವಾಗಿ ಮೂರನೇ ಸ್ಥಾನಕ್ಕೆ ಇಳಿದಿದ್ದ ಹಿಲರಿ, ಫೆಬ್ರವರಿ 5ರಂದು ನಡೆಯುವ "ಮಹಾನ್ ಮಂಗಳವಾರ" ಚುನಾವಣೆಯವರೆಗೂ ಗೆಲುವಿನ ಅಭಿಯಾನ ಕಾಯ್ದುಕೊಳ್ಳುವುದಾಗಿ ತಿಳಿಸಿದ್ದಾರೆ. ಆ ದಿನ 24 ರಾಜ್ಯಗಳು ಮತದಾನ ಮಾಡಲಿವೆ.

ಚುನಾವಣಾ ಸಮೀಕ್ಷೆಗಳ ಪ್ರಕಾರ, ಡೆಮಾಕ್ರಟ್ ಕಡೆಯಿಂದ ಬಾರಕ್ ಒಬಾಮ ಅವರೇ ಹಿಲರಿಗಿಂತ ಮುಂದಿದ್ದರು ಮತ್ತು ರಿಪಬ್ಲಿಕನ್ ಕಡೆಯಿಂದ ಮಿಟ್ ರೋಮ್ನಿ ಅವರಿಗಿಂತ ಜಾನ್ ಮೆಕೇನ್ ಮುಂದಿದ್ದರು.
ಮತ್ತಷ್ಟು
ಉಗ್ರಾಣದಲ್ಲಿ ಸ್ಫೋಟ: 40 ಮಂದಿ ಸಾವು
ಸುಹಾರ್ತೊ ದೇಹ ಸ್ಥಿತಿ ತೀರಾ ವಿಷಮ
ಮಲೇಶಿಯದಲ್ಲಿ ಭಾರತೀಯರ ನೇಮಕ ನಿಷೇಧ
ಶ್ರೀಲಂಕಾ ಸಚಿವ ದಾಸನಾಯಕೆ ಸ್ಫೋಟಕ್ಕೆ ಬಲಿ
ಭಾರತ-ಮಲೇಶ್ಯಾ ರಕ್ಷಣಾ ಸಹಕಾರ ಒಪ್ಪಂದ
ವಿದೇಶಿ ಮಿಲಿಟರಿ ಕಾರ್ಯಾಚರಣೆಯಿಲ್ಲ