ಸಿಂಗಪುರದ ಪರಮೋಚ್ಛ ಉದ್ಯಮಿಗಳಲ್ಲಿ ಒಬ್ಬರಾದ ಮುಂಬೈನಲ್ಲಿ ಹುಟ್ಟಿದ ರಾಬರ್ಟ್ ವಿಶ್ವನಾಥನ್ ಚಂದ್ರನ್ ಹೆಲಿಕಾಪ್ಟರ್ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಇಂಡೋನೇಶಿಯ ತೈಲಸಮೃದ್ಧ ರಿಯಾ ಪ್ರಾಂತ್ಯದಲ್ಲಿ ಈ ದುರಂತ ಸಂಭವಿಸಿದೆ.
ಬಹುಕೋಟಿ ಡಾಲರ್ ಪೆಟ್ರೋಲಿಯಂ ವ್ಯವಹಾರದ ಆಸ್ತಿಯನ್ನು ಹೊಂದಿದ್ದ 57 ವರ್ಷ ಪ್ರಾಯದ ಚಂದ್ರನ್ ಪತ್ನಿ ವಿವಿಯನ್ ಮತ್ತು ಇಬ್ಬರು ಮಕ್ಕಳಾದ ಶೆರಾನ್ ಮತ್ತು ಆಶ್ಲೆ ಅವರನ್ನು ಅಗಲಿದ್ದಾರೆ.ಚಂದ್ರನ್ ಕೆಮೋಯಿಲ್ ಎನರ್ಜಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕರಾಗಿದ್ದರು.
ಸಿಂಗಪುರದಲ್ಲಿ 4.4 ಶತಕೋಟಿ ಅಮೆರಿಕದ ಡಾಲರ್ ವಾರ್ಷಿಕ ಆದಾಯದೊಂದಿಗೆ ಕೆಮೋಯಿಲ್ ಎನರ್ಜಿ ಗುರುತಿಸಲ್ಪಟ್ಟಿತ್ತು. ಸಿಂಗಪುರದ ಪೌರತ್ವ ಹೊಂದಿದ್ದ ಚಂದ್ರನ್ ಅವರು 490ದಶಲಕ್ಷ ಅಮೆರಿಕ ಡಾಲರ್ ವೈಯಕ್ತಿಕ ಆಸ್ತಿಯನ್ನು ಸಂಪಾದಿಸಿದ್ದರು.
|