ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪತ್ತೆಯಾಗದ ತಂದೆ,ಮಗನ ದೇಹಗಳು
ಖೋರ್ ಕೊವೈರ್ ಪ್ರದೇಶದಲ್ಲಿ ಭಾನುವಾರ ಸಂಜೆ ಸಮುದ್ರದಲ್ಲಿ ಮುಳುಗಿ ಸತ್ತ ಭಾರತೀಯ ತಂದೆ ಮತ್ತು ಮಗನ ದೇಹಗಳನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ.ತನ್ನ ಪತ್ನಿಯ ಅಗಲಿಕೆಯ ವೇದನೆ ತಡೆಯಲಾರದೇ 30 ವರ್ಷ ವಯಸ್ಸಿನ ಮೊಹಮದ್ ಸಾನು ತನ್ನ ಜೀವನವನ್ನು ಕೊನೆಗಾಣಿಸುವ ವಿಪರೀತ ಹೆಜ್ಜೆಯನ್ನು ಇಟ್ಟನು.

ಸಾನು ಕೇರಳಕ್ಕೆ ತೆರಳಿ ತನ್ನ ಪತ್ನಿಯ ಜತೆ ವಾಸಿಸಲು ತಂದೆ ಮೊಹಮದ್ ಅಬ್ದುಲ್ ರಷೀದ್ ನಿರಾಕರಿಸಿದ್ದರಿಂದ ಈ ವಿಪರೀತದ ಕ್ರಮ ಕೈಗೊಂಡರೆಂದು ಪತ್ರಿಕೆಯೊಂದು ವರದಿ ಮಾಡಿದೆ.ಸಾನು ತಂದೆ ತನ್ನ ಸೊಸೆಯನ್ನು ಯುಎಇಗೆ ತರಲು ವ್ಯವಸ್ಥೆ ಮಾಡುತ್ತಿದ್ದರು.

ಆದರೆ ಸಾನು ಪತ್ನಿಯ ವೇದನೆ ಸಹಿಸಲಾರದೇ ಆತ್ಮಹತ್ಯೆಗೆ ಶರಣಾದ ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.ಸಾನು ಭಾನುವಾರ ಸಂಜೆ ಸಮುದ್ರದಲ್ಲಿ ಬಹುದೂರದವರೆಗೆ ತೆರಳಿದ. ಅವನ ತಂದೆ ಸಾನುವನ್ನು ಉಳಿಸಲು ಅವರು ಕೂಡ ಸಮುದ್ರಕ್ಕೆ ಇಳಿದಾಗ ಭಾರೀ ಗಾತ್ರದ ಅಲೆಗಳಲ್ಲಿ ಕೊಚ್ಚಿಕೊಂಡು ಹೋದರೆಂದು ತಿಳಿದುಬಂದಿದೆ.ಪೊಲೀಸ್ ಈಜುಗಾರರು ದೇಹಗಳನ್ನು ಹುಡುಕುವ ಯತ್ನ ಮುಂದುವರಿಸಿದ್ದು, ಪ್ರಯತ್ನ ನಿಷ್ಫಲವಾಗಿದೆ.
ಮತ್ತಷ್ಟು
ಹೆಲಿಕಾಪ್ಟರ್ ಅಪಘಾತ: ಉದ್ಯಮಿ ಚಂದ್ರನ್ ಸಾವು
ನ್ಯೂಹ್ಯಾಂಪ್‌ಶೈರ್: ಹಿಲರಿ ಕ್ಲಿಂಟನ್ ವಿಜಯ
ಉಗ್ರಾಣದಲ್ಲಿ ಸ್ಫೋಟ: 40 ಮಂದಿ ಸಾವು
ಸುಹಾರ್ತೊ ದೇಹ ಸ್ಥಿತಿ ತೀರಾ ವಿಷಮ
ಮಲೇಶಿಯದಲ್ಲಿ ಭಾರತೀಯರ ನೇಮಕ ನಿಷೇಧ
ಶ್ರೀಲಂಕಾ ಸಚಿವ ದಾಸನಾಯಕೆ ಸ್ಫೋಟಕ್ಕೆ ಬಲಿ