ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಟಿಟಿಇ-ಶ್ರೀಲಂಕಾ ಕದನ:33 ಸಾವು
ವಾಯವ್ಯ ಮನ್ನಾರ್ ಜಿಲ್ಲೆಯಲ್ಲಿ ಸರ್ಕಾರಿ ಪಡೆಗಳು ಮತ್ತು ತಮಿಳು ವ್ಯಾಘ್ರ ಬಂಡುಕೋರರು ನಡುವೆ ನಡೆದ ಭೀಕರ ಕದನದಲ್ಲಿ ಕನಿಷ್ಠ 33 ಜನರು ಸತ್ತಿದ್ದಾರೆಂದು ವರದಿಯಾಗಿದೆ. ಮದ್ದುಗುಂಡು ಮತ್ತು ವೈಮಾನಿಕ ದಾಳಿಗಳ ನೆರವಿನಿಂದ ಪಡೆಗಳು ಮಂಗಳವಾರ 4.30ಗಂಟೆಗೆ ಎಲ್‌ಟಿಟಿಇ ನೆಲೆಯೊಳಗೆ ನುಗ್ಗಿ,ಮಹಿಳಾ ಉಗ್ರಗಾಮಿ ಸೇರಿದಂತೆ ಕನಿಷ್ಠ 19 ಉಗ್ರರನ್ನು ಕೊಂದಿದ್ದಾರೆ.

ಎಲ್‌ಟಿಟಿಇ ಸಂಪರ್ಕದ ಕದ್ದಾಲಿಕೆಯಿಂದ ಘರ್ಷಣೆಯಲ್ಲಿ ಎಲ್‌ಟಿಟಿಇ ನಾಯಕಿ ಸುಂದರಮಾಲಾರ್ ಮತ್ತು 18 ಉಗ್ರರು ಸತ್ತಿರುವ ವಿಷಯ ಬೆಳಕಿಗೆ ಬಂದಿದೆ.ಈ ಘಟನೆಯಲ್ಲಿ ಅನೇಕ ಎಲ್‌ಟಿಟಿಇ ಬಂಕರ್‌ಗಳು ನಾಶವಾಗಿವೆ. ಕೆಲವು ಗಂಟೆಗಳ ಬಳಿಕ ಪರಪ್ಪಕಂಡಾ‍ಲ್‌ಗೆ ಉತ್ತರಕ್ಕೆ ಮಿಲಿಟರಿ ಸ್ಥಾಪಿತ ನೆಲೆಗಳ ಮೇಲೆ ಎಲ್‌ಟಿಟಿಇ ದಾಳಿ ಯತ್ನಕ್ಕೆ ಪಡೆಗಳು ಪ್ರತಿರೋಧ ತೋರಿಸಿದವು.

ಈ ಘರ್ಷಣೆಯ ಸಂದರ್ಭದಲ್ಲಿ ಒಬ್ಬ ಸೈನಿಕ ಮೃತಪಟ್ಟಿದ್ದು, ಐವರಿಗೆ ಗಾಯಗಳಾಗಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ ಎಲ್‌ಟಿಟಿಇಯ ತೀವ್ರ ಪ್ರತಿರೋಧದಿಂದ ಮನ್ನಾರ್‌ನ ಮುಲ್ಲಿಕುಲಂನಲ್ಲಿ ಪಡೆಗಳ ಚಲನವಲನವನ್ನು ತಪ್ಪಿಸಿದ ಬಳಿಕ ಕನಿಷ್ಠ 14 ಸರ್ಕಾರಿ ಸೈನಿಕರು ಸತ್ತಿದ್ದಾರೆ ಮತ್ತು 40 ಮಂದಿ ಗಾಯಗೊಂಡಿದ್ದಾರೆಂದು ಎಲ್‌ಟಿಟಿಇ ವೆಬ್‌ಸೈಟಿನಲ್ಲಿ ತಿಳಿಸಲಾಗಿದೆ.
ಮತ್ತಷ್ಟು
ಪತ್ತೆಯಾಗದ ತಂದೆ,ಮಗನ ದೇಹಗಳು
ಹೆಲಿಕಾಪ್ಟರ್ ಅಪಘಾತ: ಉದ್ಯಮಿ ಚಂದ್ರನ್ ಸಾವು
ನ್ಯೂಹ್ಯಾಂಪ್‌ಶೈರ್: ಹಿಲರಿ ಕ್ಲಿಂಟನ್ ವಿಜಯ
ಉಗ್ರಾಣದಲ್ಲಿ ಸ್ಫೋಟ: 40 ಮಂದಿ ಸಾವು
ಸುಹಾರ್ತೊ ದೇಹ ಸ್ಥಿತಿ ತೀರಾ ವಿಷಮ
ಮಲೇಶಿಯದಲ್ಲಿ ಭಾರತೀಯರ ನೇಮಕ ನಿಷೇಧ