ಪಾಕಿಸ್ತಾನದ ಅಣ್ವಸ್ತ್ರ ಉಗ್ರಗಾಮಿಗಳ ಕೈಗೆ ಸಿಗುವ ಸಂಭವನೀಯತೆ ಬಗ್ಗೆ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಮುಖಂಡ ಮೊಹಮದ್ ಎಲ್‌ಬರಾರ್ಡಿ ಕಳವಳ ವ್ಯಕ್ತಪಡಿಸಿದ್ದಾರೆ.
ಸುಮಾರು 30ರಿಂದ 40 ಅಣ್ವಸ್ತ್ರ ಸಿಡಿತಲೆ ಹೊಂದಿರುವ ರಾಷ್ಟ್ರದಲ್ಲಿ ಕೆಲವು ಉಗ್ರಗಾಮಿ ಶಕ್ತಿಗಳು ಬೇರುಬಿಡಬಹುದೆಂದು ಅವರು ಪಾನ್ ಅರಬ್ ದಿನಪತ್ರಿಕೆ ಅಲ್-ಹಯಾತ್‌ಗೆ ಎಲ್‌ಬರ್ಡಿ ತಿಳಿಸಿದರು.ಮಧ್ಯಪೂರ್ವ ಅಥವಾ ಮುಸ್ಲಿಂ ರಾಷ್ಟ್ರಗಳಲ್ಲಿ ಯುದ್ಧವು ಇರಾನ್‌ಗಿಂತ ಪಾಕಿಸ್ತಾನದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಅವರು ನುಡಿದರು.
ಜನಬಾಹುಳ್ಯವಿರುವ ರೇಡಿಯೊವಿಕಿರಣ ಸೌಲಭ್ಯವಿರುವ ಪ್ರದೇಶದ ಮೇಲೆ ಅಥವಾ ರಾಜಧಾನಿಯ ಮೇಲೆ ಭಯೋತ್ಪಾದಕ ತಂಡಗಳು ದಾಳಿ ಮಾಡುವ ಅವಕಾಶಗಳು ಹೆಚ್ಚಿವೆ ಎಂದು ಅವರು ಹೇಳಿದರು. ಇದರಿಂದ ವ್ಯಾಪಕ ಪ್ರದೇಶ ರೇಡಿಯೊವಿಕಿರಣದ ಸೋಂಕಿಗೆ ಒಳಗಾಗಿ ಸಾವಿರಾರು ಸಾವುಗಳು ಸಂಭವಿಸಬಹುದೆಂದು ಅವರು ಶಂಕಿಸಿದ್ದಾರೆ.
ಇಂತಹ ದಾಳಿಗಳನ್ನು ಭಯೋತ್ಪಾದಕ ತಂಡಗಳು ಮಾಡಲು ಇಚ್ಛಿಸಿರುವುದು ತಮಗೆ ಗೊತ್ತಿದೆ ಎಂದು ಹೇಳಿದ ಅವರು ಅವರು ಅಣ್ವಸ್ತ್ರಗಳನ್ನು ಕೈಗೆ ತೆಗೆದುಕೊಳ್ಳುವುದಕ್ಕಿಂತ ದಾಳಿ ಮಾಡುವಲ್ಲಿ ಯಶಸ್ವಿಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಅವರು ನುಡಿದರು.
|