ಮಾಜಿ ಪ್ರಧಾನಿ ಬೆನ್‌ಜೀರ್ ಭುಟ್ಟೋ ಹತ್ಯೆಯಲ್ಲಿ ದೇಶದ ಪ್ರಮುಖ ಗುಪ್ತಚರ ಸಂಸ್ಥೆಯ ಕೈವಾಡವಿದೆ ಎಂದು ಪಿಪಿಪಿ ಪಕ್ಷದ ಪಾಕ್ ಸಂಜಾತ ಬ್ರಿಟನ್ ಮೂಲದ ನಾಯಕ ಅಮಾನುಲ್ಲಾಖಾನ್ ಆರೋಪಿಸಿದ್ದಾರೆ.
ಪಾಕಿಸ್ತಾನದ ಪ್ರಭಾವಿ ಮಾಜಿ ಪ್ರಧಾನಿ ಭುಟ್ಟೋ ಅವರ ಹತ್ಯೆಯಲ್ಲಿ ಐಎಸ್ಐ ಪ್ರಮುಖ ಪಾತ್ರವಹಿಸಿದೆ.ಭುಟ್ಟೋ ಹತ್ಯೆ ಪೂರ್ವನಿರ್ಧರಿತವಾದುದ್ದು, ಭುಟ್ಟೋ ಹತ್ಯೆಯನ್ನು ಐಎಸ್‌ಐ ಮತ್ತು ಸಿಐಎ ಹೊಣೆಯನ್ನು ಹೊತ್ತುಕೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಕಳೆದ ಹಲವು ವರ್ಷಗಳಿಂದ ಭುಟ್ಟೋ ಪಾಕಿಸ್ತಾನಕ್ಕೆ ಹಿಂತಿರುಗಿ ಪ್ರಜಾಪ್ರಭುತ್ವ ಸ್ಥಾಪಿಸಬೇಕು ಎನ್ನುವ ದೃಢನಿರ್ಧಾರರಿಂದ ಮರಳಿದ್ದರು. ಆದರೆ ಐಎಸ್‌ಐ ಅವರನ್ನು ವಂಚಿಸಿದ್ದಲ್ಲದೇ ಹಿಂಬದಿಯಿಂದ ಹತ್ಯೆಗೆ ಸಂಚು ರೂಪಿಸಿತ್ತು ಎಂದು ಟೀಕಿಸಿದ್ದಾರೆ.
ಇಂಗ್ಲೆಂಡ್‌ನ ಲೇಬರ್ ಪಕ್ಷದ ಸಂಸತ್ ಸದಸ್ಯ ಖಾಲೀದ್ ಮಹಮೊದ್ ಅವರು ಮಾತನಾಡಿ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಬದುಕಿ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಮರಣವನ್ನಪ್ಪಿದ ಅಪರೂಪದ ಮಹಿಳೆ ಭುಟ್ಟೋ ಎಂದು ಅವರು ವರ್ಣಿಸಿದ್ದಾರೆ.
|