ಲಾಹೋರ್ ಹೈಕೋರ್ಟ್ ಬಳಿ ಆತ್ಮಹತ್ಯಾ ದಳದ ಸದಸ್ಯ ತನ್ನನ್ನು ತಾನು ಸ್ಪೋಟಿಸಿಕೊಂಡ ಪರಿಣಾಮವಾಗಿ 21 ಮಂದಿ ಸಾವನ್ನಪ್ಪಿದ್ದು 56 ಮಂದಿ ಗಾಯಾಳುಗಳಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಲಾಹೋರ್ ಹೈಕೋರ್ಟ್‌ನ ಬಳಿ ಇರುವ ಜಿಪಿಒ ಚೌಕ್ ಹತ್ತಿರ ಮುಂಜಾನೆ 11.45ಗಂಟೆಗೆ ಮುಷರಫ್ ಅಡಳಿತದ ವಿರುದ್ದ ಪ್ರತಿಭಟನೆಯಲ್ಲಿ ತೊಡಗಿದ್ದ ವಕೀಲರನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಲು ಸಿದ್ದತೆ ನಡೆಸುವಾಗ ಆತ್ಮಹತ್ಯಾ ದಳದ ಸದಸ್ಯ ತನ್ನನ್ನು ತಾನು ಸ್ಪೋಟಿಸಿಕೊಂಡ ಪರಿಣಾಮವಾಗಿ 21 ಮಂದಿ ಸಾವನ್ನಪ್ಪಿದ್ದು 56 ಮಂದಿ ಗಾಯಾಳುಗಳಾಗಿದ್ದಾರೆಂದು ಪೊಲೀಸ್ ಮುಖ್ಯಸ್ಥ ಮಲಿಕ್ ಇಕ್ಬಾಲ್ ತಿಳಿಸಿದ್ದಾರೆ.
ಆತ್ಮಹತ್ಯಾ ದಳದ ಸದಸ್ಯ ಪೊಲೀಸರು ನಿರ್ಮಿಸಿದ್ದ ತಡೆಗೋಡೆಯ ಹತ್ತಿರ ಬಂದು ತನ್ನನ್ನು ತಾನು ಸ್ಪೋಟಿಸಿಕೊಂಡಾಗ 15 ಮಂದಿ ಪೊಲೀಸರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಆತ್ಮಹತ್ಯಾ ದಳದ ಸದಸ್ಯನ ರುಂಡ 200 ಮೀಟರ್ ದೂರದಲ್ಲಿ ಪತ್ತೆಯಾಗಿದೆ ಎಂದು ಮಲಿಕ್ ವಿವರಿಸಿದ್ದಾರೆ.
|