ಶಾಂತಿ ಒಪ್ಪಂದವನ್ನು ಉಲ್ಲಂಘಿಸಿದ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಉಗ್ರರ ವಕ್ತಾರರು ಕದನ ವಿರಾಮಕ್ಕೆ ಎಲ್‌ಟಿಟಿಇ ಸಿದ್ದವಾಗಿದ್ದು ತಮ್ಮ ಮೇಲೆ ಹೇರಿರುವ ನಿಷೇಧವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.,
ಶ್ರೀಲಂಕಾ ಸರಕಾರದ ಅಪಪ್ರಚಾರಗಳಿಂದಾಗಿ ಜಗತ್ತಿನ ಅನೇಕ ದೇಶಗಳು ಎಲ್‌ಟಿಟಿಇ ಮೇಲೆ ನಿಷೇಧವನ್ನು ಹೇರಿದ್ದು. ಭಾರತ ,ಅಮೆರಿಕ ಮತ್ತು ಯುರೋಪ್ ದೇಶಗಳು ಈಗಾಗಲೇ ನಿಷೇಧ ಹೇರಿದ ಸಾಲಿಗೆ ಸೇರಿವೆ ಎಂದರು.
ಶ್ರೀಲಂಕಾ ಸರಕಾರ ಯಾವುದೇ ಕಾರಣಗಳಿಲ್ಲದೇ ಕದನ ವಿರಾಮವನ್ನು ಹಿಂತೆಗೆದುಕೊಂಡು ದಾಳಿ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಕೂಡಾ ಎಲ್‌ಟಿಟಿಇ ಕದನ ವಿರಾಮಕ್ಕೆ ಪ್ರತಿಶತ ಸಿದ್ದವಿದೆ ಎಂದು ಉಗ್ರರ ರಾಜಕೀಯ ವಿಭಾಗದ ಮುಖ್ಯಸ್ಥ ಬಿ. ನಡೇಸನ್ ತಿಳಿಸಿದ್ದಾರೆ.
ಶ್ರೀಲಂಕಾದ ಸರಕಾರದ ಏಕಪಕ್ಷೀಯ ಕ್ರಮ ಆಘಾತ ಮತ್ತು ಅಸಮಧಾನ ಮೂಡಿಸಿದೆ. ಅಂತಾರಾಷ್ಟ್ರೀಯ ಸಮುದಾಯದ ಬೆಂಬಲದೊಂದಿಗೆ ನಾರ್ವೆ ಶಾಂತಿದೂತನ ಕಾರ್ಯನಿರಂತರವಾಗಿ ಸಾಗಲಿ ಎಂದು ನಡೇಸನ್ ಮನವಿ ಮಾಡಿದ್ದಾರೆ.
ಉಗ್ರರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಶ್ರೀಲಂಕಾದ ಸೇನಾಪಡೆ ಉಗ್ರರ ರಾಜಕೀಯ ವಿಭಾಗದ ಮುಖ್ಯಸ್ಥ ಎಸ್.ಪಿ. ತಮಿಳು ಸೆಲ್ವನ್ ಅವರ ಹತ್ಯೆಯ ನಂತರ 2002ರಲ್ಲಿ ಮಾಡಿಕೊಂಡ ಒಪ್ಪಂದವನ್ನು ತಳ್ಳಿಹಾಕಲು ನಿರ್ಧರಿಸಿತ್ತು.
|