ತಮಿಳು ಉಗ್ರರು ದೇಶದ ರಾಜಕೀಯ ನಾಯಕರುಗಳ ಮೇಲೆ ಆತ್ಮಹತ್ಯಾ ದಾಳಿ ನಡೆಸಿ ಹತ್ಯೆಗೈಯಿತ್ತಿರುವ ಹಿನ್ನೆಲೆಯಲ್ಲಿ ರಾಜಕಾರಣಿಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡಿ ಕಟ್ಟೆಚ್ಚರ ವಹಿಸುವಂತೆ ಸರಕಾರ ನಿರ್ಧರಿಸಿದೆ.
ಸಂಸತ್ ಸದಸ್ಯರಿಗೆ ಇಲ್ಲಿಯವರೆಗೆ ನೀಡಲಾಗುತ್ತಿದ್ದ ಇಬ್ಬರು ಭದ್ರತಾ ಪಡೆಗಳ ಸದಸ್ಯರ ಬದಲಾಗಿ ನಾಲ್ಕು ಮಂದಿಗೆ ಹೆಚ್ಚಿಸಲಾಗಿದೆ. ರಾಜಕೀಯ ನಾಯಕರಿಗೆ ಹೆಚ್ಚಿನ ಭದ್ರತೆ ಹಾಗೂ ವಿಶೇಷ ರಕ್ಷಣೆಯನ್ನು ಒದಗಿಸಲಾಗುವುದು ಎಂದು ಸಂಸತ್ ಸಭಾಪತಿ ಲೋಕುಬಂದಾರಾ ತಿಳಿಸಿದ್ದಾರೆ.
ಜನೆವರಿ ತಿಂಗಳಿನಲ್ಲಿ ಇಬ್ಬರು ಸಂಸತ್ ಸದಸ್ಯರು ಸೇರಿದಂತೆ ಸಚಿವ ಡಿಎಂ ದಾಸನಾಯಕೆ ಅವರನ್ನು ಹತ್ಯೆಗೈದ ಘಟನೆಗಳಿಂದಾಗಿ ಭದ್ರತಾ ವ್ಯವಸ್ಥೆಯನ್ನು ತಕ್ಷಣವೆ ಹೆಚ್ಚಿಸಲಾಗಿದೆ ಎಂದು ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಿದ ನಂತರ ತಿಳಿಸಿದ್ದಾರೆ.
ವರ್ಷದ ಮೊದಲ ದಿನದಂದು ಕೊಲಂಬೊದ ಹೃದಯ ಭಾಗದಲ್ಲಿರುವ ಮಂದಿರಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳಿದ ಯುನೈಟೆಡ್ ನ್ಯಾಷನಲ್ ಪಕ್ಷದ ಮುಖಂಡ ಟಿ. ಮಹೇಶ್ವರನ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.
ಯುನೈಟೆಡ್ ನ್ಯಾಷನಲ್ ಪಕ್ಷದ ಮುಖಂಡ ಟಿ. ಮಹೇಶ್ವರನ್ ಅವರ ಹತ್ಯೆಯ ನಂತರದ ವಾರದೊಳಗೆ ರಸ್ತೆ ಬದಿಯಲ್ಲಿ ಬಾಂಬ್ ಸ್ಪೋಟಿಸಿ ಐವರು ಸೇನಾಧಿಕಾರಿಗಳನ್ನು ಹತ್ಯೆ ಮಾಡಿದ್ದರು.
|