ಗಲ್ಫ್ ಪ್ರದೇಶದ ಸಮುದ್ರ ತೀರದಲ್ಲಿ ಅಮೆರಿಕ ಹಡಗುಗಳ ಮೇಲೆ ಇರಾನ್ ಪಡೆಗಳು ದಾಳಿ ನಡೆಸಿದಲ್ಲಿ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಹಡಗುಗಳ ಮೇಲೆ ದಾಳಿ ಮಾಡಿದಲ್ಲಿ ಇರಾನ್ ವಿರುದ್ದ ಯಾವುದೇ ರೀತಿಯ ಕಠಿಣ ಕ್ರಮವನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ ಎನ್ನುವುದನ್ನು ಇರಾನ್ ಅರಿಯಬೇಕು. ಆದ್ದರಿಂದ ದಾಳಿ ಮಾಡುವುದನ್ನು ನಿಲ್ಲಿಸುವುದು ಒಳಿತು ಎಂದು ಬುಷ್ ಸಲಹೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ತೀರಪ್ರದೇಶದಲ್ಲಿದ್ದ ಅಮೆರಿಕದ ಹಡಗುಗಳ ಮೇಲೆ ಇರಾನ್ ದೇಶಕ್ಕೆ ಸೇರಿದ ಐದು ದೋಣಿಗಳು ದಾಳಿ ನಡೆಸಿದಾಗ ಉಭಯ ದೇಶಗಳಲ್ಲಿ ಉದ್ರಿಕ್ತ ವಾತಾವರಣ ತಲೆದೋರಿತ್ತು.
ನಮ್ಮ ಸ್ವತ್ತಿನ ಮೇಲೆ ದಾಳಿ ನಡೆಯುವುದನ್ನು ತಡೆಯಲು ಎಲ್ಲ ರೀತಿಯ ಹೋರಾಟಕ್ಕೆ ಸಿದ್ದವಾಗಿದ್ದೇವೆ.ಇರಾನ್ ಈ ರೀತಿಯ ಚಟುವಟಿಕೆಗಳನ್ನು ನಿಲ್ಲಿಸದಿದ್ದಲ್ಲಿ ಭಾರಿ ಪ್ರಮಾದವನ್ನು ಎದುರಿಸಬೇಕಾಗುತ್ತದೆ ಎಂದು ಬುಷ್ ಎಚ್ಚರಿಸಿದ್ದಾರೆ.
|