ಮೊದಲ ಬಾರಿಗೆ ನೇಪಾಳದ ತೇನ್ ಸಿಂಗ್ ಶೇರ್ಪಾ ಜತೆಗೆ ಎವರೆಸ್ಟ್ ಶಿಖರವೇರಿದ ನ್ಯೂಜಿಲೆಂಡಿನ ಸರ್ ಎಡ್ಮಂಡ್ ಹಿಲರಿ ತನ್ನ 88ರ ವಯಸ್ಸಿನಲ್ಲಿ ನಿಧನರಾದರು.
ಹಿಲರಿ ಅವರು 1953ರಲ್ಲಿ ಹಿಮಾಲಯವನ್ನೇರಿದ್ದರು. ಮುಪ್ಪಾವರಿಸಿದ್ದ ಅವರು ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು.
ಹಿಲರಿ ನ್ಯೂಜಿಲೆಂಡಿನ ಬಹುಪರಿಚಿತ ಪುತ್ರ. ಅಲ್ಲಿನ ಐದು ಡಾಲರ್ ನೋಟಿನಲ್ಲಿ ಅವರ ಹೆಸರಿದೆ. ಎವರೆಸ್ಟ್ ಏರಿದ ಬಳಿಕ ಎಡ್ಮಂಡ್ ಅವರು, ದಕ್ಷಿಣ ಧ್ರುವ ಹಾಗೂ ಹಿಮಾಲಯಗಳಲ್ಲಿ ಸಾಕಷ್ಟು ಸಾಹಸ ಯಾತ್ರೆಗಳನ್ನು ಕೈಗೊಂಡಿದ್ದರು.
ಅವರು ಹಿಮಾಲಯದ ತಪ್ಪಲಲ್ಲಿ ಬದುಕುತ್ತಿರುವ ನೇಪಾಳದ ಶೇರ್ಪಾಗಳಿಗೆ ಸಹಾಯ ಹಸ್ತ ನೀಡಲು ತನ್ನ ಜೀವನದ ಕೆಲ ಸಮಯವನ್ನು ಮುಡಿಪಾಗಿರಿಸಿದ್ದರು. ಮಾತ್ರವಲ್ಲದೆ ಭಾರತದಲ್ಲಿ ನ್ಯಾಜಿಲೆಂಡ್ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
|