ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊಹರಂ ಮಾಸಾರಂಭ: ಪಾಕಿಸ್ತಾನದ ಎಲ್ಲೆಡೆ ಕಟ್ಟೆಚ್ಚರ
ಮೊಹರಂ ಮಾಸ ಇಂದು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಎಲ್ಲಾ ಕಡೆ ಕಟ್ಟೆಚ್ಚರ ವಹಿಸಲಾಗಿದ್ದು, ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಮತ್ತು ಶಾಂತಿ ಸಮಿತಿಗಳನ್ನು ಬಲಪಡಿಸಲಾಗಿದೆ.

ಜನಾಂಗೀಯ ಹಿಂಸಾಚಾರ ಹೆಚ್ಚಳವಾಗುವ ಆತಂಕದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಲಾಹೋರಿನಲ್ಲಿ ಗುರುವಾರ 26 ಮಂದಿಯನ್ನು ಬಲಿತೆಗೆದುಕೊಂಡ ಆತ್ಮಹತ್ಯಾ ಬಾಂಬ್ ದಾಳಿ ನಡೆದ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಇಸ್ಲಾಮಿಕ್ ಮಾಸವಾದ ಮೊಹರಂ ಶುಕ್ರವಾರ ಆರಂಭವಾಗಲಿದೆ. ಎಲ್ಲ ನಗರ ಮತ್ತು ಪಟ್ಟಣಗಳಲ್ಲಿ ಶಾಂತಿ ಸಮಿತಿಗಳನ್ನು ಸಕ್ರಿಯಗೊಳಿಸಲಾಗಿದೆ. ಈ ಮಾಸದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕಾರ್ಯತಂತ್ರ ರೂಪಿಸಲು ಜಿಲ್ಲಾ ಆಡಳಿತಗಳು ಹಾಗೂ ಕಾನೂನು ಅನುಷ್ಠಾನ ಏಜೆನ್ಸಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಂತರಿಕ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.

ಮೊಹರಂ ಮಾಸದಲ್ಲಿ ಅತ್ಯಂತ ಸೂಕ್ಷ್ಮ ಪಟ್ಟಣ ಎಂದು ಗುರುತಿಸಲಾಗಿರುವ ನಗರಗಳಲ್ಲಿ ಲಾಹೋರ್ ಕೂಡ ಸೇರಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಾವಿರಾರು ಮಂದಿ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ಅಲ್ಲಲ್ಲಿ ನಿಯೋಜಿಸಲಾಗಿದೆ.
ಮತ್ತಷ್ಟು
ತೇನಸಿಂಗ್ ಜತೆ ಎವರೆಸ್ಟ್ ಏರಿದ್ದ ಹಿಲರಿ ನಿಧನ
ಅಮೆರಿಕ ಹಡಗುಗಳ ಮೇಲೆ ದಾಳಿ;ಬುಷ್ ಎಚ್ಚರಿಕೆ
ಶ್ರೀಲಂಕಾ ; ರಾಜಕೀಯ ನಾಯಕರಿಗೆ ಹೆಚ್ಚಿದ ಭದ್ರತೆ
ಎಲ್‌ಟಿಟಿಇ; ಕದನ ವಿರಾಮಕ್ಕೆ ಸಿದ್ದ, ನಿಷೇಧ ತೆರುವು ಅಗತ್ಯ
ಆತ್ಮಹತ್ಯಾ ಬಾಂಬ್ ದಾಳಿ; 21ಮಂದಿ ಸಾವು
ಬೆನ್‌ಜೀರ್ ಹತ್ಯೆಯಲ್ಲಿ ಐಎಸ್‌ಐ ಕೈವಾಡ