ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯೂಯಾರ್ಕ್: ಐವರಲ್ಲೊಬ್ಬರಿಗೆ ಎಚ್ಐವಿ ರಿಸ್ಕ್
ನ್ಯೂಯಾರ್ಕಿನಲ್ಲಿ ಐದು ಮಂದಿಗೆ ಒಬ್ಬರಂತೆ ವಯಸ್ಕರು ಎಚ್ಐವಿ ತೊಂದರೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಧಾನ ಕಾರಣವೆಂದರೆ ಹಲವರೊಂದಿಗೆ ಅಸುರಕ್ಷಿತ ದೈಹಿಕ ಸಂಪರ್ಕ ಪಡೆಯುವುದು ಮತ್ತು ಡ್ರಗ್ ಸೇವನೆಗಾಗಿ ಅಸುರಕ್ಷಿತ ಇಂಜೆಕ್ಷನ್ ಸೂಜಿ ಬಳಸುವುದು.

ವಿಶೇಷವೆಂದರೆ, ಅವರಲ್ಲಿ ಶೇ.92ರಷ್ಟು ಮಂದಿಗೂ ತಮಗೆ ಏಡ್ಸ್ ಬರಬಹುದೆಂಬ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ ಎಂಬುದನ್ನು ಅಮೆರಿಕ ಆರೋಗ್ಯ ಇಲಾಖೆಯ ಅಧ್ಯಯನವೊಂದು ಹೆರಗೆಡಹಿದೆ.

ಹಲವಾರು ಮಂದಿಯೊಂದಿಗೆ ಲೈಂಗಿಕ ಸಂಪರ್ಕ ಇರಿಸಿಕೊಳ್ಳುವವರಲ್ಲಿ, ಶೇ.60 ಮಂದಿಯೂ ಕಾಂಡೋಂ ಬಳಕೆ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಈ ಮೂಲಕ, ತಮ್ಮನ್ನು ಏಡ್ಸ್‌ನ ಕಬಂಧ ಬಾಹುಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ನೋಡುವುದಾದರೆ, ಅಮೆರಿಕನ್ನರು ಲೈಂಗಿಕವಾಗಿ ತೊಂದರೆಯಲ್ಲಿ ಸಿಲುಕಿಕೊಳ್ಳುವಷ್ಟೇ ಪ್ರಮಾಣದಲ್ಲಿ ಮಾದಕ ದ್ರವ್ಯ ಚುಚ್ಚಿಕೊಳ್ಳುವುದರಿಂದಲೂ ರಿಸ್ಕ್‌ನಲ್ಲಿ ಸಿಲುಕುತ್ತಾರೆ. ಈ ಅಧ್ಯಯನದ ವರದಿಯ ಪ್ರಕಾರ, ಏಡ್ಸ್ ಮತ್ತು ಎಚ್ಐವಿ ತೊಂದರೆಯ ಬಗ್ಗೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಲ್ಲ. ಈ ಬಗ್ಗೆ ಜನರಿಗೆ ಮತ್ತಷ್ಟು ಶಿಕ್ಷಣ ನೀಡುವ ಅಗತ್ಯವಿದೆ ಎಂಬುದು ವೇದ್ಯವಾಗುತ್ತದೆ.

ನ್ಯೂಯಾರ್ತ್ ಪಟ್ಟಣದ ಶೇ.1.4ರಷ್ಟು ವಯಸ್ಕರು ಎಚ್ಐವಿ ಬಾಧಿತರಾಗಿದ್ದಾರೆ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ.
ಮತ್ತಷ್ಟು
ಮೊಹರಂ ಮಾಸಾರಂಭ: ಪಾಕಿಸ್ತಾನದ ಎಲ್ಲೆಡೆ ಕಟ್ಟೆಚ್ಚರ
ತೇನಸಿಂಗ್ ಜತೆ ಎವರೆಸ್ಟ್ ಏರಿದ್ದ ಹಿಲರಿ ನಿಧನ
ಅಮೆರಿಕ ಹಡಗುಗಳ ಮೇಲೆ ದಾಳಿ;ಬುಷ್ ಎಚ್ಚರಿಕೆ
ಶ್ರೀಲಂಕಾ ; ರಾಜಕೀಯ ನಾಯಕರಿಗೆ ಹೆಚ್ಚಿದ ಭದ್ರತೆ
ಎಲ್‌ಟಿಟಿಇ; ಕದನ ವಿರಾಮಕ್ಕೆ ಸಿದ್ದ, ನಿಷೇಧ ತೆರುವು ಅಗತ್ಯ
ಆತ್ಮಹತ್ಯಾ ಬಾಂಬ್ ದಾಳಿ; 21ಮಂದಿ ಸಾವು