ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್ಟಿಟಿಇ ನೆಲೆಗೆ ವಾಯು ದಾಳಿ: 20 ಸಾವು
ಎಲ್ಟಿಟಿಇ ಬಂಡುಕೋರ ನಿಯಂತ್ರಿತ ಪ್ರದೇಶಕ್ಕೆ ಶ್ರೀಲಂಕಾ ವಾಯು ಸೇನೆ ವಿಮಾನಗಳು ಬಾಂಬ್ ಸುರಿಮಳೆಗೈದಿರುವಂತೆಯೇ, ಭೂಪ್ರದೇಶದಲ್ಲಿಯೂ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಣ ಹೋರಾಟದಲ್ಲಿ ಕನಿಷ್ಠ 20 ಮಂದಿ ವ್ಯಾಘ್ರರು ಸತ್ತಿದ್ದಾರೆ ಎಂದು ಸೇನೆ ಶುಕ್ರವಾರ ತಿಳಿಸಿದೆ.

ಮುಲ್ಲೈತಿವು ಪ್ರದೇಶದ ಅಲ್ಲಂಪಿಲಿ ಎಂಬಲ್ಲಿನ ಎಲ್ಟಿಟಿಇ ಉಗ್ರರ ನೆಲೆಗೆ ಇಂದು ಬೆಳಗ್ಗೆ ಶ್ರೀಲಂಕಾ ವಾಯು ಪಡೆಯು ವೈಮಾನಿಕ ದಾಳಿ ನಡೆಸಿತು ಎಂದು ರಕ್ಷಣಾ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ವಾಯುಪಡೆ ಮೂಲಗಳ ಪ್ರಕಾರ, ಸೂಪರ್‌ಸಾನಿಕ್ ಫೈಟರ್ ಜೆಟ್‌ಗಳ ಮೂಲಕ ಬಾಂಬ್ ದಾಳಿ ನಡೆಸಲಾಯಿತು. ಬಾಂಬ್ ದಾಳಿಯಲ್ಲಿ ಉದ್ದೇಶಿತ ಗುರಿಯನ್ನು ನಾಶಪಡಿಸಲಾಗಿದೆ ಎಂಬುದನ್ನು ಪೈಲಟ್‌ಗಳು ಖಚಿತಪಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭೂಪ್ರದೇಶದಲ್ಲಿ ನಡೆದ ಹೋರಾಟದಲ್ಲಿ, ಉಯಿಳಾಂಕುಲಂ ಪ್ರದೇಶದಲ್ಲಿ 13 ಉಗ್ರರು ಸಾವಿಗೀಡಾಗಿದ್ದರೆ, ಇತರ ಎರಡು ಕಡೆಗಳಲ್ಲಿ ನಡೆಸಿದ ದಾಳಿಗಳಲ್ಲಿ ಇನ್ನೂ 7 ಮಂದಿಯನ್ನು ಹತ್ಯೆಗೈಯಲಾಗಿದೆ. ಎಲ್ಟಿಟಿಇ ಉಗ್ರರ ಶವಗಳನ್ನು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ ಅಧಿಕಾರಿಗಳಿಗೆ ಒಪ್ಪಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಮತ್ತಷ್ಟು
ನ್ಯೂಯಾರ್ಕ್: ಐವರಲ್ಲೊಬ್ಬರಿಗೆ ಎಚ್ಐವಿ ರಿಸ್ಕ್
ಮೊಹರಂ ಮಾಸಾರಂಭ: ಪಾಕಿಸ್ತಾನದ ಎಲ್ಲೆಡೆ ಕಟ್ಟೆಚ್ಚರ
ತೇನಸಿಂಗ್ ಜತೆ ಎವರೆಸ್ಟ್ ಏರಿದ್ದ ಹಿಲರಿ ನಿಧನ
ಅಮೆರಿಕ ಹಡಗುಗಳ ಮೇಲೆ ದಾಳಿ;ಬುಷ್ ಎಚ್ಚರಿಕೆ
ಶ್ರೀಲಂಕಾ ; ರಾಜಕೀಯ ನಾಯಕರಿಗೆ ಹೆಚ್ಚಿದ ಭದ್ರತೆ
ಎಲ್‌ಟಿಟಿಇ; ಕದನ ವಿರಾಮಕ್ಕೆ ಸಿದ್ದ, ನಿಷೇಧ ತೆರುವು ಅಗತ್ಯ