ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್ಟಿಟಿಇ ವಿಶ್ವದ ಅತ್ಯಂತ ವಿನಾಶಕಾರಿ ಸಂಘಟನೆ: ಎಫ್‌ಬಿಐ
ಎಲ್ಟಿಟಿಇ ವಿಶ್ವದ "ಅತ್ಯಂತ ಅಪಾಯಕಾರಿ ಮತ್ತು ವಿನಾಶಕಾರಿ ಸಂಘಟನೆ" ಎಂದು ಬಣ್ಣಿಸಿರುವ ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ, ತಮ್ಮ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ಸಂಗ್ರಹಿಸಲೆಂದೇ ಎಲ್ಟಿಟಿಇ ಸ್ಥಾಪಿಸಿರುವ ನಕಲಿ ಚಾರಿಟಿಗಳಿಗೆ ಹಣ ನೀಡುವ ಮೊದಲು ದಾನಿಗಳು ಎಚ್ಚರ ವಹಿಸುವಂತೆ ಕರೆ ನೀಡಿದೆ.

ಶ್ರೀಲಂಕಾದಲ್ಲಿನ ತಮ್ಮ "ಭಯೋತ್ಪಾದನಾ ಶಿಬಿರ"ಗಳಿಗಾಗಿ ಮತ್ತು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಖರೀದಿಸುವುದಕ್ಕಾಗಿ ಅಮೆರಿಕದಲ್ಲೂ ಎಲ್ಟಿಟಿಇ ಉಗ್ರರು ಸಂಘಟನೆಗಳನ್ನು ಸ್ಥಾಪಿಸಿಕೊಂಡಿದ್ದಾರೆ ಎಂದು ಎಫ್‌ಬಿಐ ತಿಳಿಸಿದೆ.

ಆತ್ಮಹತ್ಯಾ ಬಾಂಬರ್‌ಗಳ ಬಳಕೆಯನ್ನು ಹೆಚ್ಚು ನಿಖರಗೊಳಿಸಿದ, ಆತ್ಮಹತ್ಯಾ ಬೆಲ್ಟ್‌ಗಳ ಶೋಧನೆ ಮತ್ತು ಮಹಿಳಾ ಬಾಂಬರ್‌ಗಳನ್ನು ಮೊದಲು ಬಾರಿ ಬಳಸಿದ ಅಪ-ಖ್ಯಾತಿಗೆ ಎಲ್ಟಿಟಿಇ ಪಾತ್ರವಾಗಿದೆ ಎಂದು ಫೆಡರಲ್ ತನಿಖಾ ಸಂಸ್ಥೆ ಹೇಳಿದೆ.

ಕಳೆದ ಎರಡು ವರ್ಷಗಳಲ್ಲಿ ತನ್ನ ಹಿಂಸಾತ್ಮಕ ಮತ್ತು ರಕ್ತದಾಹಿ ಅಭಿಯಾನದಲ್ಲಿ ಇದುವರೆಗೆ ಸುಮಾರು 4 ಸಾವಿರ ಮಂದಿಯನ್ನು ಎಲ್ಟಿಟಿಇ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿರುವ ಎಫ್‌ಬಿಐ, ಇಬ್ಬರು ವಿಶ್ವಮಟ್ಟದ ನಾಯಕರನ್ನು (1991ರಲ್ಲಿ ರಾಜೀವ್ ಗಾಂಧಿ ಮತ್ತು 1993ರಲ್ಲಿ ಶ್ರೀಲಂಕಾ ಅಧ್ಯಕ್ಷ ರಣಸಿಂಘೆ ಪ್ರೇಮದಾಸ) ಅದು ಹತ್ಯೆಗೈದಿದೆ ಎಂದು ನೆನಪಿಸಿದೆ.
ಮತ್ತಷ್ಟು
ಎಲ್ಟಿಟಿಇ ನೆಲೆಗೆ ವಾಯು ದಾಳಿ: 20 ಸಾವು
ನ್ಯೂಯಾರ್ಕ್: ಐವರಲ್ಲೊಬ್ಬರಿಗೆ ಎಚ್ಐವಿ ರಿಸ್ಕ್
ಮೊಹರಂ ಮಾಸಾರಂಭ: ಪಾಕಿಸ್ತಾನದ ಎಲ್ಲೆಡೆ ಕಟ್ಟೆಚ್ಚರ
ತೇನಸಿಂಗ್ ಜತೆ ಎವರೆಸ್ಟ್ ಏರಿದ್ದ ಹಿಲರಿ ನಿಧನ
ಅಮೆರಿಕ ಹಡಗುಗಳ ಮೇಲೆ ದಾಳಿ;ಬುಷ್ ಎಚ್ಚರಿಕೆ
ಶ್ರೀಲಂಕಾ ; ರಾಜಕೀಯ ನಾಯಕರಿಗೆ ಹೆಚ್ಚಿದ ಭದ್ರತೆ