ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್ ಎಚ್ಚರಿಕೆ: ಪ್ರತಿಕ್ರಿಯೆ ನೀಡದ ಅಮೆರಿಕ
ಅಲ್ ಖಾಯಿದಾ ಅಥವಾ ತಾಲಿಬಾನ್ ಉಗ್ರರ ಶೋಧಕ್ಕಾಗಿ ಅಮೆರಿಕ ಪಡೆಗಳು ಏಕಪಕ್ಷೀಯವಾಗಿ ತಮ್ಮ ದೇಶದ ಬುಡಕಟ್ಟು ಪ್ರದೇಶಕ್ಕೆ ನುಗ್ಗಿದರೆ ಪರಿಸ್ಥಿತಿ ನೆಟ್ಟಗಿರದು ಎಂಬ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯಿಸಲು ಅಮೆರಿಕ ನುಣುಚಿಕೊಂಡಿದೆ.

ತಾನು ಈ ಬಗೆಗಿನ ಪತ್ರಿಕಾ ವರದಿಗಳನ್ನು ಮಾತ್ರವೇ ನೋಡಿರುವುದಾಗಿ ಅಮೆರಿಕ ರಾಜ್ಯಾಂಗ ಇಲಾಖೆ ವಕ್ತಾರ ಟಾಮ್ ಕ್ಯಾಸೇ ಹೇಳಿದ್ದಾರೆ. "ಅವರು ವಾಸ್ತವವಾಗಿ ಏನು ಹೇಳಿದ್ದಾರೆ ಅಥವಾ ಏನು ಹೇಳಿಲ್ಲ ಎಂಬುದು ನನಗೆ ಖಚಿತವಾಗಿಲ್ಲ" ಎಂದಷ್ಟೇ ಅವರು ಹೇಳಿದ್ದಾರೆ.

ನಾವು ಪಾಕಿಸ್ತಾನ ಜತೆಗೆ ಸಹಕಾರಾತ್ಮಕ ಸಂಬಂಧ ಹೊಂದಿದ್ದೇವೆ ಎಂಬುದು ಸ್ಪಷ್ಟ. ಭಯೋತ್ಪಾದನೆ, ಉಗ್ರವಾದ ನಿರ್ನಾಮದ ನಮ್ಮ ಹೋರಾಟದಲ್ಲಿ ಪಾಕಿಸ್ತಾನವು ನಮ್ಮ ಅತಿಮುಖ್ಯವಾದ ಪಾಲುದಾರ ರಾಷ್ಟ್ರ ಎಂದು ಹೇಳಿರುವ ಅವರು, ಅಮೆರಿಕ ಏನು ಮಾಡಿದರೂ, ಏನು ಮಾಡುವುದಿದ್ದರೂ ಅದು ಪಾಕಿಸ್ತಾನ ಸರಕಾರದ ಪೂರ್ಣ ಸಹಕಾರದ ಮೂಲಕವೇ ಆಗುತ್ತದೆ ಎಂದು ನುಡಿದರು.

ಅಮೆರಿಕವು ಪಾಕ್ ನೆಲಕ್ಕೆ ಅತಿಕ್ರಮ ಪ್ರವೇಶಿಸಿದಲ್ಲಿ ಅದು ನಮ್ಮ ಸಾರ್ವಭೌಮತೆಯ ಉಲ್ಲಂಘನೆಯಾಗಲಿದ್ದು, ಹಾಗಾದಲ್ಲಿ ಅವರು ಪಶ್ಚಾತ್ತಾಪ ಪಡಬೇಕಾದೀತು ಎಂದು ಮುಷರಫ್ ಎಚ್ಚರಿಸಿದ್ದುದಾಗಿ ಸಿಂಗಾಪುರ ದೈನಿಕವೊಂದು ಶುಕ್ರವಾರ ವರದಿ ಮಾಡಿತ್ತು.

ಈ ಮಧ್ಯೆ, ಪಾಕಿಸ್ತಾನವು ಅಲ್ ಖಾಯಿದಾ ಉಗ್ರಗಾಮಿಗಳ ಸುರಕ್ಷಿತ ಸ್ವರ್ಗವಾಗುತ್ತಿರುವ ಬಗ್ಗೆ ಅಮೆರಿಕದ ಸೇನಾ ಸಿಬ್ಬಂದಿ ವಿಭಾಗದ ಜಂಟಿ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಎಲ್ಟಿಟಿಇ ವಿಶ್ವದ ಅತ್ಯಂತ ವಿನಾಶಕಾರಿ ಸಂಘಟನೆ: ಎಫ್‌ಬಿಐ
ಎಲ್ಟಿಟಿಇ ನೆಲೆಗೆ ವಾಯು ದಾಳಿ: 20 ಸಾವು
ನ್ಯೂಯಾರ್ಕ್: ಐವರಲ್ಲೊಬ್ಬರಿಗೆ ಎಚ್ಐವಿ ರಿಸ್ಕ್
ಮೊಹರಂ ಮಾಸಾರಂಭ: ಪಾಕಿಸ್ತಾನದ ಎಲ್ಲೆಡೆ ಕಟ್ಟೆಚ್ಚರ
ತೇನಸಿಂಗ್ ಜತೆ ಎವರೆಸ್ಟ್ ಏರಿದ್ದ ಹಿಲರಿ ನಿಧನ
ಅಮೆರಿಕ ಹಡಗುಗಳ ಮೇಲೆ ದಾಳಿ;ಬುಷ್ ಎಚ್ಚರಿಕೆ