ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚಿದ ಉದ್ವೇಗದ ನಡುವೆ, ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಡೆಮೋಕ್ರಾಟ್ ಅಧ್ಯಕ್ಷೀಯ ಅಭ್ಯರ್ಥಿ ಹಿಲೇರಿ ಕ್ಲಿಂಟನ್ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಯುದ್ಧ ಮಾಡಲು ಬುಷ್‌ಗೆ ಅಧಿಕಾರವಿಲ್ಲ ಎಂದು ಹೇಳಿರುವ ಮಾಜಿ ಪ್ರಥಮ ಮಹಿಳೆ ಹಿಲೇರಿ ಸೆನೆಟ್‌ನಲ್ಲಿ ತಾವು ಶಾಸನವನ್ನು ಮಂಡಿಸಿದ್ದು, ಬುಷ್ ಅವರಿಗೆ ಯುದ್ಧ ಘೋಷಿಸುವ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ನುಡಿದರು.
ಇರಾನ್ ಜತೆ ಮಿಲಿಟರಿ ಘರ್ಷಣೆಗೆ ಅಧ್ಯಕ್ಷ ಬುಷ್ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ನನ್ನ ವಿರೋಧವಿದೆ ಎಂದು ಹೇಳಿದ ಅವರು, ಇನ್ನೊಂದು ಸಮರ ನಡೆಸುವ ಅಧಿಕಾರ ಅವರಿಗಿಲ್ಲ. ಅದನ್ನು ನಾವು ತಪ್ಪಿಸಬೇಕು ಎಂದು ನುಡಿದರು.
ವೆಸ್ಟ್ ಕೋಸ್ಟ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಚುನಾವಣೆ ಪ್ರಚಾರದಲ್ಲಿ ನಿರತವಾಗಿರುವ ಹಿಲೇರಿ ಕ್ಲಿಂಟನ್ ಅವರು, ಇರಾನಿಯನ್ ರಿವಾಲ್ಯುಷನ್ ಗಾರ್ಡ್‌ನ್ನು ಭಯೋತ್ಪಾದನೆ ಸಂಘಟನೆ ಎಂದು ಹೆಸರಿಸಲು ಸೆನೆಟ್‌ನಲ್ಲಿ ಮತ ನೀಡಿದ ಕ್ರಮವನ್ನು ಸಮರ್ಥಿಸಿಕೊಂಡರು.
ಇರಾನ್ ಕ್ರಾಂತಿಕಾರಿ ದಳವನ್ನು ಭಯೋತ್ಪಾದನಾ ಸಂಘಟನೆ ಎಂದು ಹೆಸರಿಸುವ ಮೂಲಕ ನಾವು ರಾಜತಾಂತ್ರಿಕ ಮಾರ್ಗ ಹಿಡಿಯುವುದಾದರೆ ಅದನ್ನು ಬಳಸಲು ಇನ್ನೊಂದು ಅಸ್ತ್ರವಾಗುತ್ತದೆ ಎಂದು ಅವರು ನುಡಿದರು. ಇರಾನ್ ನಿಜವಾದ ನಿರ್ಧಾರಗಳು ಧಾರ್ಮಿಕ ನಾಯಕತ್ವ ಅಥವಾ ಅಯಾತೊಲ್ಲಾಗಳಿಂದ ರೂಪುಗೊಂಡಿದ್ದು, ಅವು ಇರಾನ್ ಕ್ರಾಂತಿಕಾರಿ ಪಡೆಯನ್ನು ನಿಯಂತ್ರಿಸುತ್ತದೆ ಎಂದು ಅವರು ನುಡಿದರು.
ಅವರು ವಿಶ್ವಾದ್ಯಂತ ಭಯೋತ್ಪಾದನೆಗೆ ಬೆಂಬಲ ನೀಡಿದ್ದಾರೆ. ಅವರು ಹೆಜ್ಬೋಲ್ಲಾಗೆ, ಹಮಾಸ್‌ಗೆ, ಅರ್ಜೈಂಟನಾದಿಂದ ಸೌದಿ ಅರೇಬಿಯಾದ ಜನರ ಸಾವಿಗೆ ಹೊಣೆಯಾಗಿದ್ದಾರೆ ಎಂದು ಲಾಸ್ ಏಂಜಲ್ಸ್‌ನಲ್ಲಿ ಮಾತನಾಡುತ್ತಾ ಅವರು ಹೇಳಿದರು.
|