ಮಾಜಿ ಪ್ರಧಾನಮಂತ್ರಿ ಬಿಲವಾಲ ಭುಟ್ಟೊ ಅವರನ್ನು ಪಕ್ಷದ ಮುಂದಿನ ಅಧ್ಯಕ್ಷ ಪದವಿಗೆ ಏರಿಸುವ ಪಿಪಿಪಿ ನಿರ್ಧಾರವನ್ನು ಮುರ್ತಾಜಾ ಭುಟ್ಟೊ ಅವರ ಪುತ್ರಿಯಾದ ಫಾತಿಮಾ ಭುಟ್ಟೊ ಟೀಕಿಸಿದ್ದಾರೆ. ಬಿಲ್ವಾಲಾನನ್ನು ಉನ್ನತ ಹುದ್ದೆಗೆ ಏರಿಸುವುದು ಅಪಾಯಕಾರಿ ಕ್ರಮವಾಗಿದ್ದು, ಅದರಿಂದ ಪಾಕಿಸ್ತಾನಕ್ಕೆ ಉಪಯೋಗವಿಲ್ಲ ಎಂದು ನುಡಿದಿದ್ದಾರೆ.
ಭುಟ್ಟೊ ವಂಶಸ್ಥರೇ ಅಧಿಕಾರಕ್ಕೇರಬೇಕೆಂಬುದು ಅಪಾಯಕಾರಿ. ಅದರಿಂದ ಪಾಕಿಸ್ತಾನಕ್ಕೆ ಅನುಕೂಲವಿಲ್ಲ. ಪ್ರಜಾತಾಂತ್ರಿಕ ಮಾರ್ಗದಲ್ಲಿ ಸಾಗುವ ಪಕ್ಷಕ್ಕೆ ಅದರಿಂದ ಉಪಯೋಗವಿಲ್ಲ. ನಾವು ವೇದಿಕೆಗಳ ಬಗ್ಗೆ ಯೋಚಿಸದೇ ವ್ಯಕ್ತಿಗಳ ಬಗ್ಗೆ ಮಾತ್ರ ಯೋಚಿಸಿದರೆ ಅದರಿಂದ ಪೌರರಾಗಿ ನಮಗೆ ಸಹಾಯವಾಗುವುದಿಲ್ಲ ಎಂದು ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದು ಕೆಲವರು ಒತ್ತೆಹಿಡಿದಿಟ್ಟುಕೊಳ್ಳುವ ಕ್ಷೇತ್ರವಾಗಿ ಕೌಟುಂಬಿಕ ವ್ಯವಹಾರವಾಗುತ್ತದೆ. ಪ್ರಾಚೀನ ಕಲಾಕೃತಿಗಳ ಅಂಗಡಿಯಲ್ಲಿ "ಅವರು ಮತ್ತು ಅವರ ಮಕ್ಕಳು ಮತ್ತು ಮೊಮ್ಮಕ್ಕಳು" ಎಂಬ ನಾಮಫಲಕ ಹಾಕಿದಂತೆ ಇರುತ್ತದೆ ಎಂದು ಹೇಳಿದರು. ತಾವು ಗಂಡು ಸಂತಾನಕ್ಕೆ ಸೇರಿದವರಾಗಿದ್ದರೂ ಕೂಡ ತಾನಾಗಲೀ ತನ್ನ 17 ವರ್ಷದ ಸೋದರನಾಗಲೀ ಅದಕ್ಕೆ ಹಕ್ಕುದಾರರಲ್ಲ ಎಂದು ಫಾತಿಮಾ ಹೇಳಿದರು.
|