ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಬ್ಯಾಂಕ್ ಯೋಜನೆಗಳಲ್ಲಿ ವಂಚನೆ ಬಯಲು
ಭಾರತದ ಐದು ವಿಶ್ವಬ್ಯಾಂಕ್ ನೆರವಿನ ಆರೋಗ್ಯ ಯೋಜನೆಗಳಲ್ಲಿ ವಂಚನೆ ಮತ್ತು ಭ್ರಷ್ಟಾಚಾರದ ಗಂಭೀರ ಪ್ರಕರಣಗಳನ್ನು ಬಯಲುಮಾಡಿರುವುದಾಗಿ ವಿಶ್ವ ಬ್ಯಾಂಕ್ ಶುಕ್ರವಾರ ತಿಳಿಸಿದೆ. ತಾವು ಮತ್ತು ಸರ್ಕಾರ ಈ ಬಗ್ಗೆ ಆಳವಾದ ತನಿಖೆ ಮಾಡುವುದಾಗಿ ವಿಶ್ವಬ್ಯಾಂಕ್ ಅಧ್ಯಕ್ಷ ರಾಬರ್ಟ್ ಜೋಲಿಕ್ ಪಣ ತೊಟ್ಟಿದ್ದಾರೆ. 2006ರಲ್ಲಿ ವಿಶ್ವಬ್ಯಾಂಕ್ ಭಾರತ ಸರ್ಕಾರದ ಬೆಂಬಲದಿಂದ ಆರಂಭಿಸಿದ ವಿವರವಾದ ಅನುಷ್ಠಾನ ಪರಾಮರ್ಶೆಯಲ್ಲಿ ಇಂತಹ ಸಮಸ್ಯೆಗಳ ಬಗ್ಗೆ ಪುರಾವೆ ಸಿಕ್ಕಿದೆ.

ಎಚ್‌ಐವಿ/ಏಡ್ಸ್, ಮಲೇರಿಯ ಮತ್ತು ಕ್ಷಯ ಸೇರಿದಂತೆ 1997ರಷ್ಟು ಹಿಂದಿನ ವಿಶ್ವಬ್ಯಾಂಕ್ ಬೆಂಬಲಿತ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ವಿಶ್ವಬ್ಯಾಂಕ್ ಆರ್ಥಿಕ ನೆರವು ನೀಡಿದ ಅಭಿವೃದ್ಧಿ ಯೋಜನೆಗಳಲ್ಲಿ ಕೂಡ ಭ್ರಷ್ಟಾಚಾರ ನಡೆದಿರುವ ಬಗ್ಗೆ ಕಳವಳ ವ್ಯಕ್ತವಾಗಿದ್ದು, ಯೋಜನೆಗಳ ಬಗ್ಗೆ ಬ್ಯಾಂಕ್‌ನ ಅಜಾಗರೂಕತೆಯ ನ್ಯೂನತೆಗಳನ್ನು ನಿಭಾಯಿಸಲು ಈಗ ಜೋಲಿಕ್ ಮೇಲೆ ಒತ್ತಡ ಹೆಚ್ಚಿದೆ.

ಈ ತನಿಖೆಯು ವಂಚನೆ ಮತ್ತು ಭ್ರಷ್ಟಾಚಾರದ ಅಸ್ವೀಕಾರಾರ್ಹ ಲಕ್ಷಣಗಳನ್ನು ಬಹಿರಂಗಮಾಡಿದೆ ಎಂದು ಜೋಲಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸಮಸ್ಯೆಗಳು ಹೇಗಾಯಿತೆಂದು ಭಾರತ ಸರ್ಕಾರ ಮತ್ತು ವಿಶ್ವಬ್ಯಾಂಕ್ ಆಳವಾದ ತನಿಖೆ ನಡೆಸಲು ಬದ್ಧವಾಗಿದೆ ಎಂದು ಅವರು ನುಡಿದರು.

ವಿಶ್ವಬ್ಯಾಂಕ್ ಪ್ರಾಯೋಜಿತ ಆರೋಗ್ಯ ಯೋಜನೆಗಳಲ್ಲಿ ಸಮಸ್ಯೆಗಳು ಮೊದಲಿಗೆ 2005ರಲ್ಲಿ ಉದ್ಭವವಾಯಿತು. ಆದರೆ 2006ರಲ್ಲಿ ಅದು ಬೆಳಕಿಗೆ ಬಂತು. ಆಗಿನ ಮಾಜಿ ವಿಶ್ವ ಬ್ಯಾಂಕ್ ಅಧ್ಯಕ್ಷ ಪಾಲ್ ವುಲ್ಫೋವಿಟ್ಜ್ ಈ ಕ್ಷೇತ್ರಕ್ಕೆ ನೆರವು ನೀಡುವುದನ್ನು ನಿಲ್ಲಿಸಿದ್ದರು.

ಇದರಿಂದ ವಿಶ್ವಬ್ಯಾಂಕ್, ಸರ್ಕಾರ ಮತ್ತು ದಾನಿ ರಾಷ್ಟ್ರ ಬ್ರಿಟನ್ ನಡುವೆ ಉದ್ವೇಗಕ್ಕೆ ಕಾರಣವಾಗಿತ್ತು. ಹಣಕಾಸು ಹರಿವನ್ನು ನಿಲ್ಲಿಸುವುದರಿಂದ ಬಡಜನರಿಗೆ ನೋವಾಗುತ್ತದೆ ಮತ್ತು ಭ್ರಷ್ಟಾಚಾರ ಸಮಸ್ಯೆ ನಿಭಾಯಿಸುವ ಮೂಲಕ ರಾಷ್ಟ್ರಗಳಿಗೆ ನೆರವು ನೀಡುವುದನ್ನು ಮುಂದುವರಿಸಬೇಕು ಎಂದು ಬ್ರಿಟನ್ ವಾದಮಂಡಿಸಿತ್ತು.
ಮತ್ತಷ್ಟು
ಬಿಲವಾಲ ಭುಟ್ಟೊ ಪಿಪಿಪಿ ಅಧ್ಯಕ್ಷ: ಫಾತಿಮಾ ಟೀಕೆ
ಇರಾನ್ ವಿರುದ್ಧ ಕಾರ್ಯಾಚರಣೆಗೆ ವಿರೋಧ
ಮುಷರಫ್ ಎಚ್ಚರಿಕೆ: ಪ್ರತಿಕ್ರಿಯೆ ನೀಡದ ಅಮೆರಿಕ
ಎಲ್ಟಿಟಿಇ ವಿಶ್ವದ ಅತ್ಯಂತ ವಿನಾಶಕಾರಿ ಸಂಘಟನೆ: ಎಫ್‌ಬಿಐ
ಎಲ್ಟಿಟಿಇ ನೆಲೆಗೆ ವಾಯು ದಾಳಿ: 20 ಸಾವು
ನ್ಯೂಯಾರ್ಕ್: ಐವರಲ್ಲೊಬ್ಬರಿಗೆ ಎಚ್ಐವಿ ರಿಸ್ಕ್