ಥೈವಾನ್‌ನಲ್ಲಿ ನಡೆದ ಮಹಾಚುನಾವಣೆಯಲ್ಲಿ, ಈ ವರೆಗೆ ವಿರೋಧ ಪಕ್ಷವಾಗಿದ್ದ ನ್ಯಾಷನಲಿಸ್ಟ್ ಪಕ್ಷಕ್ಕೆ ಭರ್ಜರಿ ಜಯ ಲಭಿಸಿದೆ.
ನ್ಯಾಷನಲಿಸ್ಟ್ ಪಕ್ಷವು ಚೀನಾ ದೇಶದೊಂದಿಗೆ ಹತ್ತಿರದ ಸಂಬಂಧ ಹೊಂದಿರುವ ಪಕ್ಷವಾಗಿದ್ದು, ಒಟ್ಟು ಸ್ಥಾನಗಳಲ್ಲಿ ಮೂರನೇ ಎರಡು ಭಾಗದಷ್ಟು ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ.
ದಿ.ಕುಮಿಟಾಂಗ್ (ಕೆಎಂಟಿ) ಪಕ್ಷ ಮತ್ತು ಇತರ ಮೈತ್ರಿ ಕೂಟವು, ಚುನಾವಣೆ ನಡೆದಿರುವ 113 ಸ್ಥಾನಗಳಲ್ಲಿ 86 ಸ್ಥಾನಗಳನ್ನು ಪಡೆದು ಐತಿಹಾಸಿಕವಾದ ಜಯವನ್ನು ದಾಖಲಿಸಿದೆ ಎಂದು ಕೆಎಂಟಿ ಯ ಅಧ್ಯಕ್ಷ ಉ-ಪೋ ಸುಂಗ್ ಅವರು ಪ್ರಕಟಪಡಿಸಿದರು.
ನ್ಯಾಷನಲಿಸ್ಟ್ ಪಕ್ಷವು ಜಯ ದಾಖಲಿಸಿದ ಕೂಡಲೇ ಹಿಂದಿನ ಅಧ್ಯಕ್ಷ ಚೆನ್- ಶಿ- ಬೈನ್ ಅವರು ಅವರು ತಮ್ಮ ಡೆಮೊಕ್ರಟಿಕ್ ಪ್ರೋಗ್ರೇಸಿವ್(ಡಿಪಿಪಿ) ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಇದು ಪಕ್ಷದ ಇತಿಹಾಸದಲ್ಲಿಯೇ ದಯನೀಯ ಸೋಲು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಜಯದ ಪರಿಣಾಮ ಕೆಎಂಟಿ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಮಾ-ಹಿಂಗ್- ಜಿಯೋ ಅವರ ಬಲ ಹೆಚ್ಚಿದ್ದು ಮಾರ್ಚ್ 22 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ತಯಾರಾಗಿದ್ದಾರೆ.
|