ಭುಟ್ಟೋ ಹತ್ಯೆಯಲ್ಲಿ ಸರಕಾರದ ಕೈವಾಡವಿದೆ ಎಂಬ ಆರೋಪವನ್ನು ನಿರಾಕರಿಸಿದ್ದ ಮುಷರಫ್, ಬೇನಜೀರ್ ಭುಟ್ಟೋ ಕಳೇಬರವನ್ನು ಸಮಾಧಿಯಿಂದ ಹೊರತೆಗೆಯಬೇಕೆಂದು ಕೋರಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು ಭುಟ್ಟೋ ಹತ್ಯೆಯಲ್ಲಿ ಸರಕಾರವು ಭಾಗಿಯಾಗಿದೆ ಎಂಬ ಆರೋಪಕ್ಕೆ ವಿರಾಮನೀಡುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.ಏನೇ ಆದರೂ ಭುಟ್ಟೋ ಕುಟುಂಬದ ಒಪ್ಪಿಗೆಯಿಲ್ಲದೆ ಶವಪರೀಕ್ಷೆಯನ್ನು ನಡೆಸಲು ಮುಷರಫ್ ನಿರಾಕರಿಸಿದ್ದಾರೆ. ಏತನ್ಮಧ್ಯೆ,ಪಾಕಿಸ್ತಾನದಲ್ಲಿ ಅಲ್‌ಖಾಯಿದಾ ವಿರುದ್ಧ ಅಮೆರಿಕವು ಪ್ರಾರಂಭಿಸುತ್ತಿರುವ ಸಿಐಎ ಕಾರ್ಯಾಚರಣೆಯ ಕುರಿತು ಮುಷರಫ್ ನಿರಾಕರಣೆ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 27ರಂದು ಭುಟ್ಟೋ ಹತ್ಯೆಯಾದ ದಿನ ಪಾಕ್ ಸರಕಾರ ಭುಟ್ಟೋ ಅವರ ಮರಣೋತ್ತರ ಪರೀಕ್ಷೆಯನ್ನು ನಡೆಸಿರಲಿಲ್ಲ ಬಳಿಕ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಭುಟ್ಟೋ ಹತ್ಯೆಯ ಬಗ್ಗೆ ಸರಕಾರದಿಂದ ನೈಜ ವರದಿ ಬಹಿರಂಗಕ್ಕಾಗಿ ಆಗ್ರಹಿಸಿತ್ತು.
ಭುಟ್ಟೋ ಬುಲೆಟ್‌ನಿಂದ ಹತ್ಯೆಯಾಗಿದ್ದರೇ ಎಂಬುದನ್ನು ದೃಢಪಡಿಸುವ ಸಲುವಾಗಿ ಅವರ ದೇಹವನ್ನು ಸಮಾಧಿಯಿಂದ ಹೊರತೆಗೆಯಬೇಕೆಂದು ಮುಷರಫ್ ಹೇಳಿದ್ದಾರೆ.
|