ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ-ಚೀನ ಬಾಂಧವ್ಯ ವೃದ್ಧಿಗೆ ಪ್ರಧಾನಿ ಕರೆ
PTI
ಏಷ್ಯದ ಎರಡು ದೈತ್ಯ ರಾಷ್ಟ್ರಗಳ ನಡುವೆ ಹೆಚ್ಚಿನ ವ್ಯಾಪಾರ, ಬಂಡವಾಳ ಮತ್ತು ಆರ್ಥಿಕ ಸಂಪರ್ಕಕ್ಕೆ ಸಮಾನ ಅವಕಾಶ ಸೃಷ್ಟಿಸುವ ಬಗ್ಗೆ ಭಾರತ ಮತ್ತು ಚೀನ ಒಂದಾಗಿ ಕೆಲಸ ಮಾಡಬೇಕು ಎಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ಸೋಮವಾರ ಹೇಳಿದರು.

ಭಾರತ-ಚೀನ ಆರ್ಥಿಕ ವ್ಯಾಪಾರ ಮತ್ತು ಬಂಡವಾಳ ಶೃಂಗಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ತೆರಿಗೆಯೇತರ ನಿರ್ಬಂಧಗಳು, ಐಪಿಆರ್ ರಕ್ಷಣೆ ಮತ್ತು ಮಾರುಕಟ್ಟೆ ಸಂಬಂಧಿತ ವಿನಿಮಯ ದರಗಳು ಮುಂತಾದ ವಿಷಯಗಳನ್ನು ಆಯಾ ಸರ್ಕಾರಗಳು ನಿಭಾಯಿಸುವುದೆಂದು ನೆರೆದಿದ್ದ ಉದ್ಯಮಿಗಳಿಗೆ ಸಿಂಗ್ ಭರವಸೆ ನೀಡಿದರು.
.
ಜೈವಿಕ ತಂತ್ರಜ್ಞಾನ, ಸುಧಾರಿತ ಸಾಮಗ್ರಿ, ಮರುಬಳಕೆ ಇಂಧನ ಮತ್ತಿತರ ಹೊಸ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಶೋಧಿಸಬೇಕೆಂದು ಅವರು ಭಾರತದ ಉದ್ಯಮಿಗಳಿಗೆ ಕರೆ ನೀಡಿದರು ಮತ್ತು ಸಾಂಪ್ರದಾಯಿತ ಕ್ಷೇತ್ರಗಳಾದ ಪೆಟ್ರೋಕೆಮಿಕಲ್ಸ್, ಉಕ್ಕು, ಆರೋಗ್ಯ ಸೇವೆ, ಐಟಿ ಮತ್ತು ವಾಹನೋದ್ಯಮ ಕ್ಷೇತ್ರಗಳಲ್ಲಿ ಬಂಡವಾಳಕ್ಕೆ ಉತ್ತೇಜನ ನೀಡುವಂತೆ ಅವರು ಕರೆನೀಡಿದರು.

ಉದ್ಯಮಗಳ ಅನುಷ್ಠಾನಕ್ಕೆ ಮಹತ್ವದ ಯೋಜನೆ ಮತ್ತು ನೀಲನಕ್ಷೆ ರೂಪಿಸುವುದು, ಲಾಭದಾಯಕ ಉದ್ಯಮ ಮಾದರಿಗಳ ಸೃಷ್ಟಿ, ಇನ್ನಿತರರ ಮಾರುಕಟ್ಟೆಗಳ ಬಗ್ಗೆ ಒಳನೋಟ ಮತ್ತು ಉದ್ಯಮ ಸಂಪ್ರದಾಯಗಳು ಮತ್ತು ವ್ಯವಸ್ಥಾಪನೆ ಶೈಲಿಗಳು ಸೇರಿದಂತೆ ಈ ಉದ್ದೇಶಗಳ ಸಾಧನೆಗೆ ಐದು ಹಂತಗಳ ಕಾರ್ಯತಂತ್ರವನ್ನು ಪ್ರಧಾನಮಂತ್ರಿ ಸಲಹೆ ಮಾಡಿದರು.
ಮತ್ತಷ್ಟು
ಭುಟ್ಟೋ ದೇಹವನ್ನು ಸಮಾಧಿಯಿಂದ ಹೊರತೆಗೆಯಬೇಕು:ಮುಷರಫ್
ಥೈವಾನ್ : ನ್ಯಾಷನಲಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವು
ಅತೀ ತಾಪಮಾನದ ವರ್ಷ 2007
ವಿಶ್ವಬ್ಯಾಂಕ್ ಯೋಜನೆಗಳಲ್ಲಿ ವಂಚನೆ ಬಯಲು
ಬಿಲವಾಲ ಭುಟ್ಟೊ ಪಿಪಿಪಿ ಅಧ್ಯಕ್ಷ: ಫಾತಿಮಾ ಟೀಕೆ
ಇರಾನ್ ವಿರುದ್ಧ ಕಾರ್ಯಾಚರಣೆಗೆ ವಿರೋಧ