ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಕೀಯದಿಂದ ದೂರವುಳಿಯಲು ಕಯಾನಿ ಆದೇಶ
ರಾಜಕೀಯದಿಂದ ದೂರ ಉಳಿಯುವಂತೆ ಪಾಕಿಸ್ತಾನ ಸೇನಾಪಡೆಯ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಜ್ ಕಯಾನಿ ಎಲ್ಲ ಸೇನಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ರಾಷ್ಟ್ರದ ಕಾನೂನುಗಳು ಮತ್ತು ಸಂವಿಧಾನದಲ್ಲಿ ಸೇನಾಪಡೆಯ ಪಾತ್ರವೇನೆಂಬುದನ್ನು ಈಗಾಗಲೇ ವ್ಯಾಖ್ಯಾನಿಸಲಾಗಿದ್ದು, ರಾಷ್ಟ್ರದ ರಾಜಕೀಯದಲ್ಲಿ ಸೇನೆ ತಲೆಹಾಕಬಾರದು ಎಂದು ಕಟ್ಟಪ್ಪಣೆ ಮಾಡಿದ್ದಾರೆ.

ಸೇನಾಪಡೆಯ ದಂಡನಾಯಕತ್ವವನ್ನು ಜನರಲ್ ಕಿಯಾನಿ ಅವರಿಗೆ ಕಳೆದ ವರ್ಷ ನವೆಂಬರ್‌ನಲ್ಲಿ ಹಸ್ತಾಂತರಿಸಿದ್ದ ಅಧ್ಯಕ್ಷ ಮುಷರ್ರಫ್ ರಾಜಕಾರಣದಲ್ಲಿ ಸೇನೆಯ ಹಸ್ತಕ್ಷೇಪಕ್ಕೆ ರಾಜಕಾರಣಿಗಳನ್ನು ಹೊಣೆಯನ್ನಾಗಿಸಿದ್ದರು.

ಪ್ರತಿಪಕ್ಷದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸುವ ಮೂಲಕ ರಾಜಕಾರಣಿಗಳು ಸೇನಾ ಮುಖ್ಯಸ್ಥರನ್ನು ರಾಜಕೀಯಕ್ಕೆ ಎಳೆದುತರುತ್ತಿದ್ದರೆಂದು ಮುಷರ್ರಫ್ ಆಗಾಗ್ಗೆ ಹೇಳುತ್ತಿದ್ದರು.ಅಧಿಕಾರಿಗಳು ತಮ್ಮ ಸಂಬಳ ಮತ್ತು ಭತ್ಯೆಗಳನ್ನು ಪಡೆಯುವುದನ್ನು ಹೊರತುಪಡಿಸಿ ಯಾವುದೇ ಲಾಭದಾಯಕ ವ್ಯವಹಾರಗಳಲ್ಲಿ ಕೈಹಾಕದಂತೆ ಅವರು ಕರೆನೀಡಿದರು.
ಮತ್ತಷ್ಟು
ಭಾರತ-ಚೀನ ಬಾಂಧವ್ಯ ವೃದ್ಧಿಗೆ ಪ್ರಧಾನಿ ಕರೆ
ಭುಟ್ಟೋ ದೇಹವನ್ನು ಸಮಾಧಿಯಿಂದ ಹೊರತೆಗೆಯಬೇಕು:ಮುಷರಫ್
ಥೈವಾನ್ : ನ್ಯಾಷನಲಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವು
ಅತೀ ತಾಪಮಾನದ ವರ್ಷ 2007
ವಿಶ್ವಬ್ಯಾಂಕ್ ಯೋಜನೆಗಳಲ್ಲಿ ವಂಚನೆ ಬಯಲು
ಬಿಲವಾಲ ಭುಟ್ಟೊ ಪಿಪಿಪಿ ಅಧ್ಯಕ್ಷ: ಫಾತಿಮಾ ಟೀಕೆ