ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇರಾನ್ ವಿರುದ್ಧ ಬುಷ್ ಟೀಕಾಪ್ರಹಾರ
PTI
ವಿಶ್ವದ ಭಯೋತ್ಪಾದನೆ ಪ್ರಾಯೋಜಿತ ಪ್ರಮುಖ ರಾಷ್ಟ್ರ ಇರಾನ್ ಎಂದು ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಸೋಮವಾರ ಟೀಕಾಪ್ರಹಾರ ಹರಿಸುವ ಮೂಲಕ ಇರಾನ್ ವಿರುದ್ಧ ಯುದ್ಧಕ್ಕೆ ಮುನ್ಸೂಚನೆ ನೀಡಿದ್ದಾರೆ. ಇರಾನ್ ಇತರೆ ರಾಷ್ಟ್ರಗಳ ಭದ್ರತೆಗೆ ಬೆದರಿಕೆಯೊಡ್ಡಿದ್ದು, ಹೆಚ್ಚು ತಡವಾಗುವ ಮುಂಚೆ ಅದನ್ನು ಎದುರಿಸಬೇಕು ಎಂದು ಬುಷ್ ಎಚ್ಚರಿಸಿದ್ದಾರೆ. ಇಸ್ಲಾಮಿಕ್ ಆಡಳಿತದ ವಿರುದ್ಧ ತಮ್ಮ ಪ್ರಲಾಪವನ್ನು ತೀವ್ರಗೊಳಿಸಿದ ಬುಷ್ "ಇರಾನ್ ಕ್ರಮಗಳಿಂದ ಎಲ್ಲೆಡೆ ರಾಷ್ಟ್ರಗಳ ಭದ್ರತೆಗೆ ಬೆದರಿಕೆಯೊಡ್ಡಿದೆ.

ಆದ್ದರಿಂದ ಅಮೆರಿಕವು ಕೊಲ್ಲಿಯಲ್ಲಿರುವ ತಮ್ಮ ಸ್ನೇಹಿತರೊಂದಿಗೆ ದೀರ್ಘಾವಧಿ ನೆನೆಗುದಿಗೆ ಬಿದ್ದ ರಕ್ಷಣಾ ಬದ್ಧತೆಗಳನ್ನು ಬಲಪಡಿಸುತ್ತಿದೆ" ಎಂದು ಬುಷ್ ಹೇಳಿದರು. ಬುಷ್ ಯುಎಇಯ ರಾಜಧಾನಿಯಲ್ಲಿದ್ದು, ಮೂರು ದಿನಗಳ ಭೇಟಿಗಾಗಿ ಅವರು ಸೋಮವಾರ ಇಲ್ಲಿಗೆ ಆಗಮಿಸಿದ್ದಾರೆ.

"ಉಗ್ರಗಾಮಿ ತಂಡಗಳಾದ ಹೆಜ್ಬುಲ್ಲಾ, ಹಮಾಸ್, ತಾಲಿಬಾನ್ ಮತ್ತು ಅಲ್ ಕೈದಾಗಳಿಗೆ ಮತ್ತು ಇರಾಕ್‌ನ ತೀವ್ರವಾದಿ ಶಿಯಾಗಳಿಗೆ ಟೆಹರಾನ್ ಬೆಂಬಲಿಸುತ್ತಿದೆ" ಎಂದು ಆಪಾದಿಸಿದ ಅವರು, ಇರಾನ್ ತನ್ನ ನೆರೆಯ ರಾಷ್ಟ್ರಗಳಿಗೆ ಕ್ಷಿಪಣಿಗಳಿಂದ ಮತ್ತು ಜಗಳಗಂಟ ಸ್ವಭಾವದಿಂದ ಬೆದರಿಕೆ ಹಾಕುತ್ತಿದೆ ಎಂದು ದೂರಿದ್ದಾರೆ.

ಆದರೆ ಇರಾನ್ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಅಪ್ಪಿಕೊಂಡರೆ ಅಮೆರಿಕದಷ್ಟು ಒಳ್ಳೆಯ ಸ್ನೇಹಿತ ಅದಕ್ಕೆ ಸಿಗುವುದಿಲ್ಲ ಎಂದು ಬುಷ್ ಅಬು ದಾಬಿಯ ಎಮೈರೇಟ್ಸ್ ಪ್ಯಾಲೇಸ್ ಹೊಟೆಲ್‌ನಲ್ಲಿ ಭಾಷಣ ಮಾಡುತ್ತಾ ಹೇಳಿದರು.
ಮತ್ತಷ್ಟು
ರಾಜಕೀಯದಿಂದ ದೂರವುಳಿಯಲು ಕಯಾನಿ ಆದೇಶ
ಭಾರತ-ಚೀನ ಬಾಂಧವ್ಯ ವೃದ್ಧಿಗೆ ಪ್ರಧಾನಿ ಕರೆ
ಭುಟ್ಟೋ ದೇಹವನ್ನು ಸಮಾಧಿಯಿಂದ ಹೊರತೆಗೆಯಬೇಕು:ಮುಷರಫ್
ಥೈವಾನ್ : ನ್ಯಾಷನಲಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವು
ಅತೀ ತಾಪಮಾನದ ವರ್ಷ 2007
ವಿಶ್ವಬ್ಯಾಂಕ್ ಯೋಜನೆಗಳಲ್ಲಿ ವಂಚನೆ ಬಯಲು