ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಓಮನ್ ಜತೆ ಸಹಯೋಗಕ್ಕೆ ಭಾರತದ ಆಶಯ
ಓಮನ್ ಜತೆ ಮಹತ್ವದ ಸಹಯೋಗಕ್ಕೆ ಭಾರತ ಆಶಿಸಿದ್ದು, ಉಭಯ ರಾಷ್ಟ್ರಗಳ ಖಾಸಗಿ ಕ್ಷೇತ್ರಗಳ ನಡುವೆ ಸಮೀಪದ ಬಾಂಧವ್ಯಕ್ಕೆ ಇಚ್ಛಿಸಿದೆ. ಪ್ರಮುಖ ಕ್ಷೇತ್ರಗಳಾದ ಮಾಹಿತಿ ತಂತ್ರಜ್ಞಾನ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕೌಶಲ್ಯ ಹಂಚಿಕೊಳ್ಳುವ ಪ್ರಸ್ತಾವನೆಯನ್ನು ಭಾರತ ಮಾಡಿದೆ.

ಓಮನ್ ಸರ್ವಾಂಗೀಣ ಅಭಿವೃದ್ಧಿ ಸಾಧಿಸುತ್ತಿದೆ. ಅದೇ ರೀತಿ ಭಾರತದ ಆರ್ಥಿಕತೆ ಕೂಡ ಶೇ.9ರ ವೇಗದಲ್ಲಿ ಬೆಳೆಯುತ್ತಿದೆ. ಈ ಬೆಳವಣಿಗೆಯ ಸುಸ್ಥಿರತೆಗೆ ಉಭಯ ರಾಷ್ಟ್ರಗಳಿಗೆ ಬಂಡವಾಳ ಹೂಡಿಕೆ ಅಗತ್ಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಹೇಳಿದರು.

ಓಮನ್ ಸಹೋದ್ಯೋಗಿ ಯೂಸುಫ್ ಬಿನ್ ಅಲಾವಿ ಬಿನ್ ಅಬ್ದುಲ್ಲಾ ಜತೆ ಜಂಟಿಯಾಗಿ ಭಾರತೀಯ ರಾಯಭಾರ ಕಚೇರಿಯ ವಸತಿ ಸಂಕೀರ್ಣವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡುತ್ತಿದ್ದರು. ಉಭಯ ರಾಷ್ಟ್ರಗಳ ಆರ್ಥಿಕತೆಯಲ್ಲಿ ವಿಪುಲ ಅವಕಾಶಗಳಿದ್ದು, ಪರಸ್ಪರ ಅನುಕೂಲಕ್ಕಾಗಿ ಅವುಗಳನ್ನು ಬಳಸಿಕೊಳ್ಳಬೇಕು ಎಂದು ಮುಖರ್ಜಿ ಹೇಳಿದರು.
ಮತ್ತಷ್ಟು
60 ದಿನಗಳೊಳಗೆ ಸೇನೆ ವಾಪಸ್: ಹಿಲೇರಿ
ಇರಾನ್ ವಿರುದ್ಧ ಬುಷ್ ಟೀಕಾಪ್ರಹಾರ
ರಾಜಕೀಯದಿಂದ ದೂರವುಳಿಯಲು ಕಯಾನಿ ಆದೇಶ
ಭಾರತ-ಚೀನ ಬಾಂಧವ್ಯ ವೃದ್ಧಿಗೆ ಪ್ರಧಾನಿ ಕರೆ
ಭುಟ್ಟೋ ದೇಹವನ್ನು ಸಮಾಧಿಯಿಂದ ಹೊರತೆಗೆಯಬೇಕು:ಮುಷರಫ್
ಥೈವಾನ್ : ನ್ಯಾಷನಲಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವು