ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ವಿರುದ್ಧ ಒಗ್ಗಟ್ಟಿನ ಹೋರಾಟ
ಎಲ್ಲಾ ವಿಧದ ಉಗ್ರವಾದತ್ವ ಬೆಳವಣಿಗೆಗೆ ಕಂಟಕವಾಗಿದೆ ಎಂದು ಎಚ್ಚರಿಸಿರುವ ಚೀನಾ ಭೇಟಿಯಲ್ಲಿರುವ ಪ್ರಧಾನಿ ಮನ್‌ಮೋಹನ್ ಸಿಂಗ್, ಈ ದಿಶೆಯಲ್ಲಿ ಸಾಮೂಹಿಕ ಹೋರಾಟ ಅಗತ್ಯದ ಬಗ್ಗೆ ಒಲವು ತೋರಿದ್ದಾರೆ.

ಇದು ಧಾರ್ಮಿಕ ಹಿಡಿತದಲ್ಲಿರಲಿ ಅಥವಾ ಐತಿಹಾಸಿಕ ತಪ್ಪುಗಳ ನಿಮಿತ್ತದಲ್ಲಿನ ಎಲ್ಲಾ ರೀತಿಯ ಉಗ್ರವಾದತ್ವ ತಮ್ಮ ಅಭಿವೃದ್ಧಿಗೆ ಒಂದು ಬಹು ದೊಡ್ಡ ಅಪಾಯವಾಗಿದೆ ಎಂದು ಸಿಂಗ್ ತಮ್ಮ ಭಾಷಣದಲ್ಲಿ ಹೇಳಿದರು.

ತಮ್ಮ ನೆರೆ ರಾಷ್ಟ್ರಗಳಲ್ಲಿನ ಇತ್ತೀಚಿಗಿನ ಬೆಳವಣಿಗೆ ಎಲ್ಲಾ ರೀತಿಯ ಉಗ್ರವಾದತ್ವ ಮತ್ತು ಭಯೋತ್ಪಾದನೆ ವಿರುದ್ಧ ಸಾಮೂಹಿಕವಾಗಿ ಹೋರಾಡುವ ಅತ್ಯಗತ್ಯದ ಬಗ್ಗೆ ತೋರಿಸಿಕೊಟ್ಟಿದೆ ಎಂದು ಹೇಳಿದ ಮನ್‌ಮೋಹನ್, ಬೃಹತ್ ಮತ್ತು ವೈವಿದ್ಯಯುತ ಸಮಾಜಗಳಾಗಿ ತಾವು ಸೌಮ್ಯತನ ಮತ್ತು ಶಾಂತಿಪೂರ್ಣ ಸಹಬಾಳ್ವೆಯ ಲಾಭವನ್ನು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.

ತಮ್ಮ ಭಾಷಣದಲ್ಲಿ ಸಿನೋ-ಭಾರತ ಸಂಬಂಧಗಾಗಿನ ತಮ್ಮ ದೃಷ್ಠಿಕೋನವನ್ನು ಹೊರಗೆಡವಿದ ಸಿಂಗ್, ಸಕಾರಾತ್ಮಕ ಬಾಹ್ಯ ಜಗತ್ತು ಸೃಷ್ಟಿಸಲು ಮತ್ತು ಪರಸ್ಪರ ಸಮೃದ್ಧತೆಗಾಗಿ ಭಾರತ ಮತ್ತು ಚೀನಾ ಸಹಕಾರ ನೀಡಬೇಕು ಎಂದು ಹೇಳಿದರು.
ಮತ್ತಷ್ಟು
ಭಯೋತ್ಪಾದಕರ ದಮನಕ್ಕೆ ಬಲ ಅಗತ್ಯ
ಓಮನ್ ಜತೆ ಸಹಯೋಗಕ್ಕೆ ಭಾರತದ ಆಶಯ
60 ದಿನಗಳೊಳಗೆ ಸೇನೆ ವಾಪಸ್: ಹಿಲೇರಿ
ಇರಾನ್ ವಿರುದ್ಧ ಬುಷ್ ಟೀಕಾಪ್ರಹಾರ
ರಾಜಕೀಯದಿಂದ ದೂರವುಳಿಯಲು ಕಯಾನಿ ಆದೇಶ
ಭಾರತ-ಚೀನ ಬಾಂಧವ್ಯ ವೃದ್ಧಿಗೆ ಪ್ರಧಾನಿ ಕರೆ