ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಟೆ ತಾಲಿಬಾನ್ ವಶ: 30 ಸೈನಿಕರ ಹತ್ಯೆ
ಅಪ್ಘಾನಿಸ್ತಾನ-ಪಾಕ್ ಗಡಿಯಲ್ಲಿರುವ ದಕ್ಷಿಣ ವಜೀರಿಸ್ತಾನದಲ್ಲಿ ಸೇನಾಪಡೆಗಳ ಹಿಡಿತದಲ್ಲಿದ್ದ ಕೋಟೆಯೊಂದನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರು ನಡೆಸಿದ ಆಕ್ರಮಣದ ಸಂದರ್ಭ ಕನಿಷ್ಠ 30 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ವಜೀರಿಸ್ತಾನದ ಮುಖ್ಯ ಪಟ್ಟಣ ವಾನಾ ಎಂಬಲ್ಲಿ ಸೇನೆಯ ಸುಮಾರು 40 ಮಂದಿ ಕಾವಲು ಕಾಯುತ್ತಿದ್ದ ಸರಾರೋಘಾ ಕೋಟೆಗೆ ಮಂಗಳವಾರ ರಾತ್ರಿಯೇ ತಾಲಿಬಾನ್ ಉಗ್ರರು ದಾಳಿ ಮಾಡಿದ್ದರು. ಬುಧವಾರ ಮುಂಜಾನೆ ಅವರು ಕೋಟೆ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಭೀಕರ ಕದನದಲ್ಲಿ 30ಕ್ಕೂ ಹೆಚ್ಚು ಸೈನಿಕರು ಹತರಾಗಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕೆಲವು ಸೈನಿಕರನ್ನು ತಾಲಿಬಾನ್ ಉಗ್ರರು ಸೆರೆಹಿಡಿದ್ದಾರೆ ಮತ್ತು ಕೆಲವು ಸೈನಿಕರು ಸಮೀಪದ ಲಾಧಾ ಕೋಟೆಗೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಕುರಿತಾಗಿಯೂ ವರದಿಗಳು ದೊರೆತಿವೆ.

ಪಾಕಿಸ್ತಾನ ಸೇನೆಯು ಈ ದಾಳಿಯನ್ನು ಖಚಿತಪಡಿಸಿದ್ದರೂ, ಕೋಟೆಯನ್ನು ತಾಲಿಬಾನ್‌ಗಳು ವಶಪಡಿಸಿಕೊಂಡಿದ್ದಾರೆ ಎಂಬುದನ್ನು ನಿರಾಕರಿಸಿದೆ.

ದಾಳಿ ಮಾಡಿದ ತಾಲಿಬಾನ್ ತಂಡದಲ್ಲಿ ಸುಮಾರು 1000 ಮಂದಿ ಉಗ್ರರಿದ್ದರು. ಕನಿಷ್ಠ 10 ಸೈನಿಕರು ಅವರ ವಶದಲ್ಲಿದ್ದಾರೆ ಎಂದು ಶಂಕಿಸಲಾಗಿದೆ.
ಮತ್ತಷ್ಟು
ಉಗ್ರರ ವಿರುದ್ಧ ಒಗ್ಗಟ್ಟಿನ ಹೋರಾಟ
ಭಯೋತ್ಪಾದಕರ ದಮನಕ್ಕೆ ಬಲ ಅಗತ್ಯ
ಓಮನ್ ಜತೆ ಸಹಯೋಗಕ್ಕೆ ಭಾರತದ ಆಶಯ
60 ದಿನಗಳೊಳಗೆ ಸೇನೆ ವಾಪಸ್: ಹಿಲೇರಿ
ಇರಾನ್ ವಿರುದ್ಧ ಬುಷ್ ಟೀಕಾಪ್ರಹಾರ
ರಾಜಕೀಯದಿಂದ ದೂರವುಳಿಯಲು ಕಯಾನಿ ಆದೇಶ