ತದ್ರೂಪ ಸೃಷ್ಟಿಯ ಪ್ರಾಣಿಗಳ ಆಹಾರದ ಮಾರಾಟಕ್ಕೆ ಅಮೆರಿಕ ಸರ್ಕಾರ ಅನುಮತಿ ನೀಡುವ ಮೂಲಕ ಆಹಾರಕ್ಕಾಗಿ ಪ್ರಾಣಿಗಳ ತದ್ರೂಪ ಸೃಷ್ಟಿಗೆ ಅಮೆರಿಕ ಹಸಿರುನಿಶಾನೆ ತೋರಿಸಿದೆ. ತದ್ರೂಪ ಸೃಷ್ಟಿಯ ಹಂದಿಗಳು, ಜಾನುವಾರುಗಳು ಮತ್ತು ಆಡುಗಳು ಹಾಗೂ ಅವುಗಳ ಮರಿಗಳ ಮಾಂಸ ಮತ್ತು ಹಾಲು ಸುರಕ್ಷಿತವೆಂದು ಸುಮಾರು 6 ವರ್ಷಗಳ ಸಂಶೋಧನೆ ಬಳಿಕ ಆಹಾರ ಮತ್ತು ಔಷಧಿ ಆಡಳಿತವು ನಿರ್ಧರಿಸಿ ತದ್ರೂಪ ಸೃಷ್ಟಿಗೆ ಒಲವು ವ್ಯಕ್ತಪಡಿಸಿದೆ.
ತದ್ರೂಪ ಸೃಷ್ಟಿಯಿಂದ ಉಂಟಾದ ಪ್ರಾಣಿಗಳ ಉತ್ಪನ್ನವು ಅವುಗಳ ಏರಿದ ವೆಚ್ಚದಿಂದಾಗಿ ತೀವ್ರಗತಿಯಲ್ಲಿ ಮಾರಾಟವಾಗುವುದಿಲ್ಲ. ಅಂತಹ ಪ್ರಾಣಿಗಳನ್ನು ಸಂತಾನಾಭಿವೃದ್ಧಿಗೆ ಮೊದಲಿಗೆ ಬಳಸಲಾಗುವುದೆಂದು ನಿರೀಕ್ಷಿಸಲಾಗಿದೆ. ತದ್ರೂಪ ಸೃಷ್ಟಿಯ ಬಗ್ಗೆ ಕರಡು ದಾಖಲೆಗಳನ್ನು ಬಿಡುಗಡೆ ಮಾಡಿದ ಬಳಿಕ ಹೆಚ್ಚುವರಿ ಅಂಕಿಅಂಶ ಮತ್ತು ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಪರಾಮರ್ಶಿಸಿದ ನಾವು ಇಂತಹ ಸೃಷ್ಟಿಯಿಂದ ಜನಿಸಿದ ಜಾನುವಾರು, ಬಾತುಕೋಳಿ ಮತ್ತು ಆಡಿನ ಮಾಂಸ ಮತ್ತು ಹಾಲು ನಾವು ಪ್ರತಿದಿನ ಸೇವಿಸುವ ಆಹಾರದಷ್ಟೇ ಸುರಕ್ಷಿತ ಎಂದು ತೀರ್ಮಾನಿಸಿದೆವು ಎಂದು ಎಫ್‌ಡಿಎದ ಆಹಾರ ಸುರಕ್ಷತೆ ಮತ್ತು ಪೌಷ್ಠಿಕಾಂಶ ಕೇಂದ್ರದ ನಿರ್ದೇಶಕ ಸ್ಟೀಫನ್ ಸನ್ಡ್ ಹೇಳಿದ್ದಾರೆ.
|