ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊನಾಲೀಸಾಳ ನಿಗೂಢತೆ ಬಯಲು
ಖ್ಯಾತ ಚಿತ್ರಕಲಾವಿದ ಲಿಯೋನಾರ್ಡೊ ಡಾ ವಿನ್ಸಿ ರಚಿಸಿದ ಅದ್ಭುತ ಕಲಾಕೃತಿ, ಮಂದಹಾಸದ ಮುಖಾರವಿಂದದ ತೈಲವರ್ಣಚಿತ್ರ ಮೋನಾ ಲೀಸಾಳ ನಿಗೂಢತೆಯನ್ನು ಜರ್ಮನಿಯ ಸಂಶೋಧಕರು ಭೇದಿಸಿದ್ದಾರೆ. ವಿಚಿತ್ರ ಮಂದಹಾಸದ ಮೋನಾ ಲೀಸಾ ಫ್ರೋರೆಂಟೈನ್ ವ್ಯಾಪಾರಿ ಗಿಯೋಕೊಂಡೊನ ಪತ್ನಿ ಎನ್ನುವುದಕ್ಕೆ 500 ವರ್ಷಗಳಷ್ಟು ಪ್ರಾಚೀನವಾದ ಪುಸ್ತಕದಲ್ಲಿ ಗೀಚಿರುವ ಟಿಪ್ಪಣಿಗಳು ಸಾಕ್ಷ್ಯಾಧಾರ ಒದಗಿಸಿದೆ ಎಂದು ಹೈಡೆಲ್ಬರ್ಗ್ ವಿವಿಯ ಶಿಕ್ಷಣತಜ್ಞರು ಹೇಳಿದ್ದಾರೆ.

ಲಾ ಗಿಯೊಕೊಂಡಾ ಎಂದೇ ಹೆಸರಾಗಿದ್ದ ಮಹಿಳೆ ವರ್ಣಚಿತ್ರ ರಚನೆಗೆ ಕುಳಿತಿದ್ದಳೆಂದು 1550ರಲ್ಲಿ ಜಾರ್ಜಿಯೊ ವಸಾರಿ ಮಾಡಿದ ಪ್ರತಿಕ್ರಿಯೆಗಳಿಂದ ಅನೇಕ ಅಭಿಮಾನಿಗಳು ದೀರ್ಘಕಾಲದವರೆಗೆ ನಂಬಿದ್ದರು.

ಆದರೆ ಲಿಯೋನಾರ್ಡೊ ಪರಿಚಯಸ್ಥರಾದ ಅಗಸ್ಟಿನೊ ವೆಸ್ಟುಸಿ ಬರೆದ ಟಿಪ್ಪಣಿಗಳು ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಪತ್ತೆಯಾಗಿದ್ದು, ತೈಲವರ್ಣ ಚಿತ್ರ ರಚನೆ ಸಲುವಾಗಿ ಕುಳಿತಿದ್ದು ಲೀಸಾ ಡೆಲ್ ಗಿಯೊಕೊಂಡಾ ಎನ್ನುವುದನ್ನು ದೃಢಪಡಿಸಿದೆ. ಈ ಶೋಧನೆಯಿಂದ ಮೋನಾ ಲೀಸಾ ಗುರುತಿನ ಬಗ್ಗೆ ಆವರಿಸಿದ್ದ ಎಲ್ಲ ಶಂಕೆಗಳು ನಿವಾರಣೆಯಾಗಿದೆ ಎಂದು ಹೈಡೆಲ್‌ಬರ್ಗ್ ಗ್ರಂಥಾಲಯ ತಿಳಿಸಿದೆ.
ಮತ್ತಷ್ಟು
ತದ್ರೂಪ ಸೃಷ್ಟಿ ಪ್ರಾಣಿಗಳ ಆಹಾರ ಸುರಕ್ಷಿತ
ಬಸ್ಸಿನಲ್ಲಿ ಬಾಂಬ್ ಸ್ಫೋಟ: 23 ಸಾವು
ಕೋಟೆ ತಾಲಿಬಾನ್ ವಶ: 30 ಸೈನಿಕರ ಹತ್ಯೆ
ಉಗ್ರರ ವಿರುದ್ಧ ಒಗ್ಗಟ್ಟಿನ ಹೋರಾಟ
ಭಯೋತ್ಪಾದಕರ ದಮನಕ್ಕೆ ಬಲ ಅಗತ್ಯ
ಓಮನ್ ಜತೆ ಸಹಯೋಗಕ್ಕೆ ಭಾರತದ ಆಶಯ