ಸಚಿವ ಸ್ಟೀಫನ್ ಸ್ಮಿತ್ ಮಂಗಳವಾರ ಸ್ಪಷ್ಟಪಡಿಸುವ ಮೂಲಕ ಜಾನ್ ಹೋವಾರ್ಡ್ ಸರ್ಕಾರದ ಅಣ್ವಸ್ತ್ರ ನೀತಿಯಿಂದ ಸ್ಥಳಾಂತರಗೊಂಡಿದ್ದಾರೆ. ಪರ್ತ್‌ನಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ವಿಶೇಷ ಪ್ರತಿನಿಧಿ ಶ್ಯಾಮ್ ಸರಣ್ ಅವರಿಗೆ ಸ್ಮಿತ್ ಈ ಸಂದೇಶ ಮುಟ್ಟಿಸಿದ್ದಾರೆ.
ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದದ ಸದಸ್ಯರಲ್ಲದ ರಾಷ್ಟ್ರಗಳಿಗೆ ಯುರೇನಿಯಂ ರಫ್ತು ಮಾಡಬಾರದೆಂಬ ಬಲವಾದ ನೀತಿ ಬದ್ಧತೆ ಮೂಲಕ ನಾವು ಚುನಾವಣೆಗೆ ಇಳಿದಿದ್ದಾಗಿ ಸ್ಮಿತ್ ವರದಿಗಾರರಿಗೆ ತಿಳಿಸಿದರು. ಸರಣ್ ತಮ್ಮೆದುರು ಭಾರತ-ಅಮೆರಿಕ ಪರಮಾಣು ಸಹಕಾರ ವ್ಯವಸ್ಥೆಯನ್ನು ಕುರಿತು ಪ್ರಸ್ತಾಪಿಸಿದರೆಂದೂ ಅವರು ನುಡಿದರು.
ಭಾರತ-ಅಮೆರಿಕ ದ್ವಿಪಕ್ಷೀಯ ಒಪ್ಪಂದಕ್ಕೆ ಬೆಂಬಲ ಕ್ರೋಢೀಕರಿಸಲು ಸರಣ್ ಅವರನ್ನು ಮನಮೋಹನ ಸಿಂಗ್ ಅವರ ವಿಶೇಷ ಪ್ರತಿನಿಧಿಯಾಗಿ ನೇಮಿಸಲಾಗಿದೆ.ಕಳೆದ ವರ್ಷ ಸರಣ್ ಅವರು ಯುರೇನಿಯಂ ಮಾರಾಟ ನಿಷೇಧವನ್ನು ಕೊನೆಗೊಳಿಸಲು ಜಾನ್ ಹೋವಾರ್ಡ್ ಸರ್ಕಾರಕ್ಕೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿದ್ದರು.
|