ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಗೊರ್ಡಾನ್ ಬ್ರೌನ್ ಭಾರತ ಭೇಟಿ
ಏಷಿಯಾದ ಪ್ರಮುಖ ವಾಣಿಜ್ಯ ರಾಷ್ಟ್ರಗಳಾದ ಭಾರತ ಮತ್ತು ಚೀನಾ ದೇಶಗಳಿಗೆ ಇಂಗ್ಲೆಂಡ್ ಪ್ರಧಾನಿ ಗೊರ್ಡಾನ್ ಬ್ರೌನ್ ಎರಡು ದಿನಗಳ ಭಾರತ ಭೇಟಿ ನೀಡಿದ್ದಾರೆ.

ಅಮೆರಿಕದೊಂದಿಗೆ ಇರುವಂತಹ ಬಾಂಧವ್ಯವನ್ನು ಭಾರತ ಮತ್ತು ಚೀನಾ ದೇಶಗಳೊಂದಿಗೆ ವೃದ್ಧಿಸಲು ಬ್ರಿಟನ್ ಬಯಸುತ್ತಿದೆ ಎಂದು ಪ್ರಧಾನಿ ಅವರ ನಿಯೋಗದಲ್ಲಿರುವ ಹೆಸರಾಂತ ಉದ್ಯಮಿ ಹಾಗೂ ಭಾರತ ಸಂಜಾತ ಲಾರ್ಡ್ ಸ್ವರಾಜ್ ಪೌಲ್ ತಿಳಿಸಿದ್ದಾರೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ ಮಾಜಿ ಪ್ರಧಾನಿ ಟೋನಿ ಬ್ಲೇರ್‌ ಅವರ ಅಧಿಕಾರವಧಿ ಮುಗಿದ ನಂತರ ಪ್ರಧಾನಿ ಸ್ಥಾನಕ್ಕೆ ಏರಿದ ಬ್ರೌನ್ ಭಾರತಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದ್ದು ಉಭಯ ದೇಶಗಳ ಬಾಂದವ್ಯ ವೃದ್ಧಿಗೆ ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ.

ಬ್ರಿಟನ್ ಪ್ರಧಾನಿ ಬ್ರೌನ್ ಸ್ಕಾಟ್‌ಲ್ಯಾಂಡ್‌ನಲ್ಲಿರುವ ಚರ್ಚ್‌ನ ಪಾದ್ರಿಯವರ ಮಗನಾಗಿದ್ದು, ಭಾರತಕ್ಕೆ ಆಪ್ತಮಿತ್ರರಾಗಿದ್ದಾರೆ.ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳೊಂದಿಗೆ ಬಾಂಧವ್ಯ ಹೆಚ್ಚಿಸುವದರಿಂದ ಎಲ್ಲ ದೇಶಗಳಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಬ್ರೌನ್ ಜೊತೆಯಲ್ಲಿ ಉದ್ಯಮಿ ಲಾರ್ಡ್ ಸ್ವರಾಜ್ ಪೌಲ್ ಅನಿವಾಸಿ ಭಾರತೀಯ ಉದ್ಯಮಿಗಳು, ಸಂಸತ್ ಸದಸ್ಯರು ಸಮುದಾಯಗಳ ನಾಯಕರು ನಿಯೋಗದಲ್ಲಿದ್ದು, ಬಡತನ ನಿವಾರಣೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಹೋರಾಡಬೇಕಾಗಿದೆ ಎಂದು ಹೇಳಿದ್ದಾರೆ.
ಮತ್ತಷ್ಟು
ಭಾರತಕ್ಕೆ ಯುರೇನಿಯಂ ರಫ್ತಿಲ್ಲ: ಆಸ್ಟ್ರೇಲಿಯ
ಮೊನಾಲೀಸಾಳ ನಿಗೂಢತೆ ಬಯಲು
ತದ್ರೂಪ ಸೃಷ್ಟಿ ಪ್ರಾಣಿಗಳ ಆಹಾರ ಸುರಕ್ಷಿತ
ಬಸ್ಸಿನಲ್ಲಿ ಬಾಂಬ್ ಸ್ಫೋಟ: 23 ಸಾವು
ಕೋಟೆ ತಾಲಿಬಾನ್ ವಶ: 30 ಸೈನಿಕರ ಹತ್ಯೆ
ಉಗ್ರರ ವಿರುದ್ಧ ಒಗ್ಗಟ್ಟಿನ ಹೋರಾಟ