ಇರಾನ್ ಬಂಡುಕೋರರಿಗೆ ನೆರವು ಕಡಿತ ಮಾಡುವುದಾಗಿ ಭರವಸೆ ನೀಡಿದ್ದರೂ ಕೂಡ ಇನ್ನೂ ಉಗ್ರಗಾಮಿಗಳಿಗೆ ತರಬೇತಿ ನೀಡುತ್ತಿದೆ ಎಂದು ಇರಾಕ್‌ನಲ್ಲಿ ಅಮೆರಿಕದ ಪಡೆಗಳ ದಂಡಾಧಿಕಾರಿ ತಿಳಿಸಿದ್ದಾರೆ.ಇರಾನ್‌ನಿಂದ ಇರಾಕ್‌ಗೆ ಶಸ್ತ್ರಾಸ್ತ್ರಗಳ ಸರಬರಾಜು ಇಳಿಮುಖವಾಗಿರುವ ಬಗ್ಗೆ ಖಚಿತಪಟ್ಟಿಲ್ಲ ಎಂದು ತಿಳಿಸಿದ ಜನರಲ್ ಡೇವಿಡ್ ಪೆಟ್ರಾಸ್ , ಉಗ್ರಗಾಮಿಗಳಿಗೆ ಇರಾನ್ ತರಬೇತಿಯು ಇರಾಕ್ ಸ್ಥಿರತೆಗೆ ಗಂಭೀರ ಧಕ್ಕೆ ಉಂಟುಮಾಡುವುದನ್ನು ಮುಂದುವರಿಸಿದೆ ಎಂದು ಅವರು ನುಡಿದರು.
ಇರಾನ್ ಹಣ ಮತ್ತು ಶಸ್ತ್ರಾಸ್ತ್ರಗಳ ಹರಿವನ್ನು ಇರಾಕ್‌ಗೆ ನಿಲ್ಲಿಸಿದೆಯೇ ಎಂದು ಪ್ರಶ್ನಿಸಿದಾಗ ನನಗೆ ನಿಜವಾಗಲೂ ಗೊತ್ತಿಲ್ಲ. ಅದಿನ್ನೂ ಸ್ಪಷ್ಟವಾಗಿಲ್ಲ ಎಂದು ಅವರು ನುಡಿದರು. ಉಗ್ರಗಾಮಿಗಳಿಗೆ ತರಬೇತಿಯು ಅಧಿಕ ಪ್ರಮಾಣದಲ್ಲಿದೆ.
ಈ ವ್ಯಕ್ತಿಗಳು ಗಣನೀಯ ಕೌಶಲ್ಯ ಹೊಂದಿದ್ದು, ಇರಾಕ್‌ನಲ್ಲಿ ಬೇರೆ ವ್ಯಕ್ತಿಗಳಿಗೆ ತರಬೇತಿ ನೀಡಲು ಸಮರ್ಥರು ಎಂದು ಜುರ್ಬಿಟಿಯ ಗಡಿ ಚೌಕಿಯಲ್ಲಿ ತಿಳಿಸಿದರು. ಇರಾಕಿ ನಗರ ಕರ್ಬಾಲಾದಲ್ಲಿ ಶಿಯಾ ಉತ್ಸವಕ್ಕೆ ತೆರಳಲು ಇರಾನಿಯರಿಂದ ಈ ಪ್ರದೇಶವು ಕಿಕ್ಕಿರಿದು ತುಂಬಿತ್ತು.
|