ಲಂಡನ್ ಭಯೋತ್ಪಾದನೆ ಸಂಚಿನಲ್ಲಿ ದೋಷಮುಕ್ತರಾದ ಭಾರತೀಯ ವೈದ್ಯ ಮಹಮದ್ ಹನೀಫ್ ತನಿಖೆಯ ವ್ಯಾಪ್ತಿಗೆ ಇನ್ನೂ ಒಳಪಟ್ಟಿದ್ದಾರೆ ಎಂದು ಆಸ್ಟ್ರೇಲಿಯ ಪೊಲೀಸರು ತಿಳಿಸಿದ್ದಾರೆ.
ಹನೀಫ್ ಮರಳುವಿಕೆಗೆ ಹಸಿರು ನಿಶಾನೆ ತೋರಿಸಿದ ಆಸ್ಟ್ರೇಲಿಯ ಸರ್ಕಾರವು ಹನೀಫ್‌ಗೆ ವೀಸಾ ಮರಳಿ ನೀಡಬೇಕೆಂಬ ಫೆಡರಲ್ ಕೋರ್ಟ್ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ನಿರ್ಧರಿಸಿದೆ. ಆಪರೇಷನ್ ರೈನ್ ತನಿಖೆ ಮುಂದುರವರಿಯುವುದು ಎಂದು ಪೊಲೀಸ್ ತನಿಖೆಯ ಹೆಸರನ್ನು ಉಲ್ಲೇಖಿಸುತ್ತಾ ಆಸ್ಟ್ರೇಲಿಯ ಫೆಡರಲ್ ಪೊಲೀಸ್ ವಕ್ತಾರೆ ತಿಳಿಸಿದ್ದಾರೆ.
27 ವರ್ಷದ ಬೆಂಗಳೂರು ವೈದ್ಯ ಹನೀಫ್ ಮೇಲೆ ವಿಫಲಗೊಂಡ ಭಯೋತ್ಪಾದಕ ಸಂಚಿನಲ್ಲಿ ತಪ್ಪು ಆರೋಪ ಹೊರಿಸಿ ರಾಷ್ಟ್ರದಿಂದ ಹೊರಗೆ ಕಳಿಸಲಾಗಿತ್ತು. ಹನೀಫ್ ಅವರನ್ನು ಭಯೋತ್ಪಾದನೆ ಆರೋಪದಿಂದ ಮುಕ್ತಗೊಳಿಸಿದ ಬಳಿಕ ಅವರ ಉದ್ಯೋಗ ವೀಸಾವನ್ನು ಮರಳಿನೀಡುವಂತೆ ಫೆಡರಲ್ ಕೋರ್ಟ್ ಆದೇಶಿಸಿತ್ತು.
|