ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದುಬೈನಲ್ಲಿ ಭಾರತೀಯ ಶಿಕ್ಷಕಿಯ ಆತ್ಮಹತ್ಯೆ
ಬೈನಲ್ಲಿ ಅವರ್ ಓನ್ ಇಂಡಿಯನ್ ಸ್ಕೂಲ್ ಶಿಕ್ಷಕಿಯಾಗಿದ್ದ ಭಾರತೀಯ ಮೂಲದ 25 ವರ್ಷ ವಯಸ್ಸಿನ ಮೇರಿ ಮಾಡೋಟ್ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೀಲಿಂಗ್ ಫ್ಯಾನಿನಿಂದ ಅವರ ದೇಹವು ತೂಗುತ್ತಿರುವುದು ಪತ್ತೆಯಾಗಿದ್ದು, ನಿವಾಸದ ಸ್ಟೋರ್‌ರೂಮಿನಲ್ಲಿ ಆಕೆ ಬರೆದಿರುವ ಟಿಪ್ಪಣಿಯಲ್ಲಿ ಸ್ವಯಂ ಇಚ್ಛೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಯಾರೂ ಜವಾಬ್ದಾರರಲ್ಲ ಎಂದು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಶಾಲೆ ಒದಗಿಸಿದ ವಾಸ್ತವ್ಯದಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕಿಯಾದ ಮೇರಿ ಒಂಟಿಯಾಗಿ ವಾಸಿಸುತ್ತಿದ್ದಳು. ಆಕೆಯ ಜತೆ ವಾಸಿಗಳಾದ 6 ಮಂದಿ ಶಿಕ್ಷಕಿಯರು ಶಾಪಿಂಗ್‌ಗೆಂದು ಸಂಜೆ ಹೊರಗೆ ಹೋಗಿದ್ದಾಗ ಮೇರಿ ದಾರುಣ ಸಾವಪ್ಪಿದ್ದಾಳೆ.

ಶಾಲೆಯನ್ನು ಈ ಕುರಿತು ಸಂರ್ಪಕಿಸಿದಾಗ ಯಾವುದೇ ವಿವರ ನೀಡಲು ನಿರಾಕರಿಸಿತು. ಪುಣೆಯಲ್ಲಿ ವಾಸಿಸುವ ಆಕೆಯ ಕುಟುಂಬಕ್ಕೆ ಈ ಬಗ್ಗೆ ಮಾಹಿತಿ ನೀಡಿರುವುದಾಗಿ ಶಾಲಾ ಅಧಿಕಾರಿ ತಿಳಿಸಿದ್ದಾರೆ.
ಮತ್ತಷ್ಟು
ಬೇನಜೀರ್ ಹತ್ಯೆಗೆ ಅಲ್ ಕೈದಾ, ಮೆಹಸೂದ್ ಕಾರಣ
ಎಲ್‌ಟಿಟಿಇ ಉಗ್ರರಿಂದ 9 ನಾಗರಿಕರ ಹತ್ಯೆ
ತನಿಖೆಯ ವ್ಯಾಪ್ತಿಯಲ್ಲಿ ಉಳಿದಿರುವ ಹನೀಫ್
ಆಸ್ಟ್ರೇಲಿಯದಿಂದ ಕಾದುನೋಡುವ ನೀತಿ
ಉಗ್ರಗಾಮಿಗಳಿಗೆ ಇರಾನ್‌ನಿಂದ ತರಬೇತಿ
ರಾಜತಾಂತ್ರಿಕನ ಮಗ ಸೈಬರ್ ಭಯೋತ್ಪಾದಕ