ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಲ್ಲಿನಿಂದ ಹೊಡೆದು ಮರಣದಂಡನೆ ರದ್ದಿಗೆ ಆದೇಶ
ಇರಾನ್‌ನಲ್ಲಿ 9 ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಕಲ್ಲಿನಿಂದ ಹೊಡೆದು ಮರಣದಂಡನೆಗೆ ಗುರಿಪಡಿಸುವ ಕ್ರಿಯೆಗೆ ಕಾಯುತ್ತಿರುವ ನಡುವೆ, ಕಲ್ಲುಗಳಿಂದ ಹೊಡೆದು ಸಾಯಿಸುವ ಮೂಲಕ ಮರಣದಂಡನೆ ವಿಧಿಸುವ ಶಿಕ್ಷೆಯನ್ನು ರದ್ದುಮಾಡಬೇಕು ಮತ್ತು ಈ ಆಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಮಾನವ ಹಕ್ಕು ಕಾವಲು ಸಮಿತಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇರಾನ್ ಅಧಿಕಾರಿಗಳಿಗೆ ತಿಳಿಸಿದೆ.

ಈ ವಾರ ಪ್ರಕಟಿಸಲಾದ "ಇರಾನ್‌ನಲ್ಲಿ ಕಲ್ಲಿನಿಂದ ಹೊಡೆದು ಸಾಯಿಸುವುದು ಅಸ್ವೀಕಾರಾರ್ಹ ಮತ್ತು ಕ್ರೂರ ದಂಡನೆ" ಎಂಬ ವರದಿಯಲ್ಲಿ ರಾಷ್ಟ್ರದ ದಂಡ ಸಂಹಿತೆಯನ್ನು ತಿದ್ದುಪಡಿ ಮಾಡಿ ಅಥವಾ ರದ್ದುಮಾಡಿ 2002ರಲ್ಲಿ ನ್ಯಾಯಾಂಗದ ಮುಖ್ಯಸ್ಥರು ಕಲ್ಲಿನಿಂದ ಹೊಡೆಯುವ ಕ್ರಿಯೆಗೆ ನಿಷೇಧ ವಿಧಿಸಿದ್ದಕ್ಕೆ ಸಂಪೂರ್ಣ ಬದ್ಧರಾಗಬೇಕೆಂದು ಸಂಘಟನೆ ಕರೆ ನೀಡಿದೆ.

ಇರಾನ್ ಅಧಿಕಾರಿಗಳಿಂದ ಸುಧಾರಣೆಗಳ ಮನ್ನಡೆಯನ್ನು ಮತ್ತು ಕೆಲವು ಕಲ್ಲು ಹೊಡೆದು ಶಿಕ್ಷಿಸುವ ವಿಧಾನಗಳನ್ನು ಸ್ಥಗಿತಗೊಳಿಸುವ ತಿದ್ದುಪಡಿಯಾದ ದಂಡ ಸಂಹಿತೆಯ ಬಗ್ಗೆ ಚರ್ಚೆಯನ್ನು ನಾವು ಸ್ವಾಗತಿಸುವುದಾಗಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಕಾರ್ಯನಿರ್ವಾಹಕ ನಿರ್ದೇಶಕ ಲ್ಯಾರಿ ಕಾಕ್ಸ್ ತಿಳಿಸಿದ್ದಾರೆ.

ಆದಾಗ್ಯೂ, ಹೊಸ ದಂಡ ಸಂಹಿತೆಯಲ್ಲಿ ಕಲ್ಲು ಹೊಡೆದು ಸಾಯಿಸುವ ಅಥವಾ ಮರಣದಂಡನೆಯ ಇತರ ವಿಧಾನಗಳಿಗೆ ಅವಕಾಶ ನೀಡದಿರುವುದನ್ನು ಖಾತರಿ ಮಾಡಬೇಕು ಎಂದು ಕಾಕ್ಸ್ ಹೇಳಿದರು,
ಮತ್ತಷ್ಟು
ದುಬೈನಲ್ಲಿ ಭಾರತೀಯ ಶಿಕ್ಷಕಿಯ ಆತ್ಮಹತ್ಯೆ
ಬೇನಜೀರ್ ಹತ್ಯೆಗೆ ಅಲ್ ಕೈದಾ, ಮೆಹಸೂದ್ ಕಾರಣ
ಎಲ್‌ಟಿಟಿಇ ಉಗ್ರರಿಂದ 9 ನಾಗರಿಕರ ಹತ್ಯೆ
ತನಿಖೆಯ ವ್ಯಾಪ್ತಿಯಲ್ಲಿ ಉಳಿದಿರುವ ಹನೀಫ್
ಆಸ್ಟ್ರೇಲಿಯದಿಂದ ಕಾದುನೋಡುವ ನೀತಿ
ಉಗ್ರಗಾಮಿಗಳಿಗೆ ಇರಾನ್‌ನಿಂದ ತರಬೇತಿ