ರಷ್ಯದ ವಿದೇಶಾಂಗ ಸಚಿವ ಸರ್ಗೈ ಲಾವ್‌ರೋವ್ ಇರಾನ್ ಅಣ್ವಸ್ತ್ರ ಕಾರ್ಯಕ್ರಮದ ವಿವಾದಾತ್ಮಕ ವಿಷಯದ ಪರಿಹಾರಕ್ಕೆ ಜ.22ರಂದು ಬರ್ಲಿನ್‌ನಲ್ಲಿ ನಡೆಯುವ 6 ರಾಷ್ಟ್ರಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇರಾನ್ ಪರಮಾಣು ಕಾರ್ಯಕ್ರಮವನ್ನು ನಿಯಂತ್ರಿಸುವ ವಿಧಾನಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ರಷ್ಯದ ಮೂಲವೊಂದು ತಿಳಿಸಿದೆ.
ಮಾತುಕತೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐದು ಕಾಯಂ ರಾಷ್ಟ್ರಗಳು ಮತ್ತು ಜರ್ಮನಿಯ ವಿದೇಶಾಂಗ ಸಚಿವರು ಇರಾನ್ ವಿರುದ್ಧ ಹೊಸ ದಿಗ್ಬಂಧನ ವಿಧಿಸುವರೆಂದು ನಿರೀಕ್ಷಿಸಲಾಗಿದೆ. ಯುರೇನಿಯಂ ಸಂಸ್ಕರಣವನ್ನು ನಿಲ್ಲಿಸಲು ನಿರಾಕರಿಸಿರುವ ಟೆಹ್ರಾನ್ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಎರಡು ಜತೆ ದಿಗ್ಬಂಧನಗಳು ಈಗಾಗಲೇ ಜಾರಿಯಲ್ಲಿವೆ.
ಇರಾನ್ ವಿರುದ್ಧ ಮತ್ತಷ್ಟು ದಿಗ್ಬಂಧನ ವಿಧಿಸುವುದಕ್ಕೆ ಚೀನಾ ಮತ್ತು ರಷ್ಯ ತಡೆವಿಧಿಸಿತ್ತು. ಇಸ್ರೇಲ್‌ನ ಸಹೋದ್ಯೋಗಿ ಜಿಪಿ ಲಿವ್ನಿ ಜತೆ ಮಾತುಕತೆ ನಡೆಸಿದ ಬಳಿಕ ರಾಜಕೀಯ ಮತ್ತು ರಾಜತಾಂತ್ರಿಕ ವಿಧಾನಗಳ ಮೂಲಕ ರಷ್ಯಾ ಈ ಸಮಸ್ಯೆಯನ್ನು ಬಗೆಹರಿಸಲು ಸಂಕಲ್ಪ ತೊಟ್ಟಿದೆ ಎಂದು ಲಾವ್‌ರೋವ್ ಹೇಳಿದ್ದಾರೆ.
|