ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿಸ್ತಾನ ಕೈವಶಕ್ಕೆ ಅಲ್ ಕೈದಾ ಆದೇಶ
ಪಾಕಿಸ್ತಾನದ ಪಡೆಗಳ ಮೇಲೆ ಹೊಸ ದಾಳಿ ನಡೆಸುವಂತೆ ಅಲ್ ಕೈದಾ ತನ್ನ ಅನುಯಾಯಿಗಳಿಗೆ ಆದೇಶಿಸಿದ್ದು, ಆಫ್ಘಾನಿಸ್ತಾನದ ರೀತಿಯಲ್ಲಿ ಪಾಕಿಸ್ತಾನದಲ್ಲಿ ಸಹ ಜಿಹಾದಿ ಕಡ್ಡಾಯವಾಗಿದೆ ಎಂದು ತಿಳಿಸಿದೆ. ನಿನ್ನೆ ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ, ಪಾಕಿಸ್ತಾನ ಬುಡಕಟ್ಟ ಪ್ರದೇಶಗಳ ಎರಡು ಪ್ರಮುಖ ಅಲ್ ಕೈದಾ ಗುಂಪುಗಳು ಇಸ್ಲಾಮಾಬಾದ್ ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿವೆ.

ಉಜ್ಬೇಕಿಸ್ತಾನ ಇಸ್ಲಾಮಿಕ್ ಆಂದೋಳನ ಮತ್ತು ಉತ್ತರ ವಾಜಿರಿಸ್ತಾನದ ಉಜ್ಬೆಕ್ ಉಗ್ರರ ನಾಯಕ ಖಾದಿರ್ ತಾಹಿರ್ ಯಾಲ್ಡೆಶಿವ್ ಮೇಲಿನ ಆದೇಶವನ್ನು ನೀಡಿದ್ದಾನೆ. ಜು.2007ರಲ್ಲಿ 100 ಹೆಚ್ಚು ಉಗ್ರಗಾಮಿಗಳು ಮತ್ತು ಕಟ್ಟಾ ಮದ್ರಸಾ ವಿದ್ಯಾರ್ಥಿಗಳು ಅಸುನೀಗಿದ ಲಾಲ್ ಮಸೀದಿ ಕಾರ್ಯಾಚರಣೆಗೆ ಸೇಡು ತೀರಿಸಿಕೊಳ್ಳುವಂತೆ ಅವನು ಮುಸ್ಲಿಮರಿಗೆ ಒತ್ತಾಯಿಸಿದ್ದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ಕಟ್ಟುನಿಟ್ಟಾದ ಷರಿಯತ್ ಕಾನೂನನ್ನು ತರುವ ಅಗತ್ಯದ ಬಗ್ಗೆ ಯಾಲ್ಡ್‌ಶಿವ್ ಹೇಳಿದ್ದಾನೆ. ಇಸ್ಲಾಮ್ ಹೆಸರಿನಲ್ಲಿ ಪಾಕಿಸ್ತಾನವು ಸ್ಥಾಪನೆಯಾಯಿತು. ಆದ್ದರಿಂದ ಇಸ್ಲಾಮಿಕ್ ಕಾನೂನನ್ನು ಅಲ್ಲಿ ಜಾರಿಮಾಡಬೇಕು ಎಂದು ಅವನು ಹೇಳಿದ್ದಾನೆ.
ಮತ್ತಷ್ಟು
ಇರಾನ್ ಬಿಕ್ಕಟ್ಟು ಶಮನ ಸಭೆಯಲ್ಲಿ ರಷ್ಯಾ ಸಚಿವ
ಕಲ್ಲಿನಿಂದ ಹೊಡೆದು ಮರಣದಂಡನೆ ರದ್ದಿಗೆ ಆದೇಶ
ದುಬೈನಲ್ಲಿ ಭಾರತೀಯ ಶಿಕ್ಷಕಿಯ ಆತ್ಮಹತ್ಯೆ
ಬೇನಜೀರ್ ಹತ್ಯೆಗೆ ಅಲ್ ಕೈದಾ, ಮೆಹಸೂದ್ ಕಾರಣ
ಎಲ್‌ಟಿಟಿಇ ಉಗ್ರರಿಂದ 9 ನಾಗರಿಕರ ಹತ್ಯೆ
ತನಿಖೆಯ ವ್ಯಾಪ್ತಿಯಲ್ಲಿ ಉಳಿದಿರುವ ಹನೀಫ್