ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಡೋನೇಶಿಯ:ಕೋಳಿ ಜ್ವರಕ್ಕೆ 97 ಬಲಿ
ಕೋಳಿಜ್ವರದ ಸೋಂಕು ಪಶ್ಚಿಮ ಬಂಗಾಳದಲ್ಲಿ ಕಾಣಿಸಿಕೊಂಡು ಸಾವಿರಾರು ಕೋಳಿಗಳನ್ನು ಹತ್ಯೆ ಮಾಡುತ್ತಿರುವ ನಡುವೆ, ಇಂಡೋನೇಶಿಯದಲ್ಲಿ ಬಾಲಕನೊಬ್ಬ ಕೋಳಿ ಜ್ವರಕ್ಕೆ ಬಲಿಯಾಗಿದ್ದು, ಅಲ್ಲಿ ಕೋಳಿ ಜ್ವರಕ್ಕೆ ಸತ್ತವರ ಒಟ್ಟು ಸಂಖ್ಯೆ 97ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಜಕಾರ್ತದಲ್ಲಿ ಸೋಂಕು ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಟ್ಯಾಂಗೆರಾಂಗ್ ಪಟ್ಟಣದ 8 ವರ್ಷದ ಬಾಲಕ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾನೆ ಎಂದು ಸಚಿವಾಲಯದ ಕೋಳಿ ಜ್ವರ ತಡೆ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದರು. ಈ ಬಾಲಕನು ಜಕಾರ್ತದ ಪಶ್ಚಿಮ ಹೊರವಲಯದಲ್ಲಿ ಕೋಳಿಗಳ ಕಸಾಯಿಖಾನೆಯ ಬಳಿ ವಾಸಿಸುತ್ತಿದ್ದನೆಂದು ಅಧಿಕಾರಿ ತಿಳಿಸಿದ್ದಾರೆ.

ಕೋಳಿ ಜ್ವರದ ವೈರಸ್ ಏಷ್ಯಾದ ಕೋಳಿಸಾಕಣೆ ಕೇಂದ್ರಗಳಲ್ಲಿ ವ್ಯಾಪಿಸುತ್ತಿರುವ ನಡುವೆ, ಇಂಡೋನೇಶಿಯದಲ್ಲಿ 2003ರಿಂದೀಚೆಗೆ ಕೋಳಿ ಜ್ವರದ ಸಾವುಗಳು ದಾಖಲಾಗಿವೆ.
ಲಕ್ಷಾಂತರ ಕೋಳಿಗಳು ಮತ್ತು ಕಳಪೆ ವೈದ್ಯಕೀಯ ಸೌಲಭ್ಯವಿರುವ ಇಂಡೋನೇಶಿಯದಲ್ಲಿ ಕೋಳಿ ಜ್ವರದ ಸೋಂಕಿಗೆ ಪ್ರಶಸ್ತ ಸ್ಥಳವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಮತ್ತಷ್ಟು
ಪಾಕಿಸ್ತಾನ ಕೈವಶಕ್ಕೆ ಅಲ್ ಕೈದಾ ಆದೇಶ
ಇರಾನ್ ಬಿಕ್ಕಟ್ಟು ಶಮನ ಸಭೆಯಲ್ಲಿ ರಷ್ಯಾ ಸಚಿವ
ಕಲ್ಲಿನಿಂದ ಹೊಡೆದು ಮರಣದಂಡನೆ ರದ್ದಿಗೆ ಆದೇಶ
ದುಬೈನಲ್ಲಿ ಭಾರತೀಯ ಶಿಕ್ಷಕಿಯ ಆತ್ಮಹತ್ಯೆ
ಬೇನಜೀರ್ ಹತ್ಯೆಗೆ ಅಲ್ ಕೈದಾ, ಮೆಹಸೂದ್ ಕಾರಣ
ಎಲ್‌ಟಿಟಿಇ ಉಗ್ರರಿಂದ 9 ನಾಗರಿಕರ ಹತ್ಯೆ