ಮಾಜಿ ಸೋವಿಯಟ್ ರಾಷ್ಟ್ರ ಬೆಲಾರಸ್‌ನ ಪತ್ರಕರ್ತರೊಬ್ಬರು ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ ತಪ್ಪಿಗಾಗಿ ಮೂರು ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದಾರೆ. ಜನಾಂಗೀಯ ಅಥವಾ ಧಾರ್ಮಿಕ ದ್ವೇಷ ಕೆರಳಿಸುವ ವಿರುದ್ಧದ ಕಾನೂನು ಮುರಿದದ್ದಕ್ಕಾಗಿ ತಪ್ಪಿತಸ್ಥರೆಂದು ಕಂಡುಬಂದ ಅಲೆಕ್ಸಾಂಡರ್ ವಿಜ್ಕೋವ್ ಅವರು ಈ ಶಿಕ್ಷೆಗೆ ಗುರಿಯಾಗಿದ್ದಾರೆಂದು ಈಗ ಸ್ಥಗಿತಗೊಂಡಿರುವ ಸುದ್ದಿಪತ್ರಿಕೆ ಗೋಡಾದ ಸಂಪಾದಕ ತಿಳಿಸಿದ್ದಾರೆ.
ವಾರಪತ್ರಿಕೆಯ ಉಪಸಂಪಾದಕ ವಿಜಕೋವ್ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುವ ನಿರ್ಧಾರ ಕೈಗೊಂಡಿದ್ದರಿಂದ ಮೊದಲಿಗೆ ವಿಜಕೋವ್ ಮೇಲೆ ಆರೋಪಗಳನ್ನು ಹೊರಿಸಲಾಯಿತು.
ಆದರೆ ಪತ್ರಿಕೆಯ ಆಡಳಿತಮಂಡಳಿ ವಿತರಣೆ ತಡೆಹಿಡಿದಿದ್ದರಿಂದ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಲಿಲ್ಲ. ಆದರೆ ಅಷ್ಟರಲ್ಲೇ ಕಾನೂನು ಕ್ರಮ ಆರಂಭಿಸಿದ ಪ್ರಾಸಿಕ್ಯೂಟರ್‌ಗಳು ಮಾ.2006ರಲ್ಲಿ ಪತ್ರಿಕೆಯ ಟೈಟಲ್ ಹಿಂತೆಗೆದುಕೊಂಡರು.ಇಸ್ಲಾಂ ಸಂಪ್ರದಾಯದ ಪ್ರಕಾರ ಪ್ರವಾದಿ ವ್ಯಂಗ್ಯ ಚಿತ್ರವನ್ನು ಬಿಂಬಿಸುವುದು ಅಪರಾಧವೆನ್ನಿಸುತ್ತದೆ.
|