ಇರಾಕ್‌ನ ಎರಡು ಪ್ರಮುಖ ನಗರಗಳಲ್ಲಿ ಶಿಯಾದ ಪಂಥವೊಂದಕ್ಕೆ ಸೇರಿದ ಜನರು ಪೊಲೀಸರು ಮತ್ತು ಶಿಯಾ ಆರಾಧಕರ ಮೇಲೆ ದಾಳಿ ಮಾಡಿದಾಗ ಸಂಭವಿಸಿದ ಹಿಂಸಾಚಾರದಲ್ಲಿ ಸುಮಾರು 50 ಜನರು ಸತ್ತಿದ್ದಾರೆ. ಬಾಸ್ರಾದಲ್ಲಿ ಸುಮಾರು 36 ಜನರು ಮತ್ತು ನಾಸಿರಿಯದಲ್ಲಿ ಕನಿಷ್ಠ 10 ಜನರು ಬಲಿಯಾಗಿದ್ದಾರೆ.
ಈ ಪಂಥಕ್ಕೆ ಸೇರಿದ ಬಂದೂಕುಧಾರಿಗಳು ಕೈವಶ ಮಾಡಿಕೊಂಡ ಪೊಲೀಸ್ ಠಾಣೆಯ ಮೇಲೆ ಅಮೆರಿಕ ನೇತೃತ್ವದ ಸಮ್ಮಿಶ್ರ ಪಡೆಯ ಜೆಟ್ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ದಾಳಿ ಮಾಡಿವೆಯೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಾವಿರಾರು ಶಿಯಾ ಜನರು ಹುತಾತ್ಮನಾದ ತಮ್ಮ ನೆಚ್ಚಿನ ಸಂತನಿಗೆ ಗೌರವ ಸಲ್ಲಿಸಲು ಅಶುರಾ ಆಚರಣೆ ಅಂಗವಾಗಿ ಎದೆಗಳನ್ನು ಬಡಿದುಕೊಳ್ಳುತ್ತಾ, ಹಾಡುಹೇಳುತ್ತಾ ಮೆರವಣಿಗೆಯಲ್ಲಿ ಸಾಗುವಾಗ ಶಿಯಾ ಪಂಥದವರಿಂದ ದಾಳಿ ನಡೆಯಿತೆಂದು ಹೇಳಲಾಗಿದೆ.
ಈ ಪಂಥದ ಅನುಯಾಯಿಗಳು ಸ್ವರ್ಗದ ಸೈನಿಕರೆಂದು ತಮ್ಮನ್ನು ಭಾವಿಸಿಕೊಂಡಿದ್ದು, ಗುಪ್ತ ಇಮಾಂ ಎಂದು ಹೆಸರಾದ ಇನ್ನೊಬ್ಬ ಶಿಯಾನ ಬರುವಿಕೆಗಾಗಿ ಕಾಯುತ್ತಿದ್ದು ಅವನು ಜಗತ್ತಿಗೆ ನ್ಯಾಯ ಒದಗಿಸುತ್ತಾನೆನ್ನುವುದು ಅವರ ನಂಬಿಕೆಯಾಗಿದೆ.
|